Connect with us

    LATEST NEWS

    ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪತ್ರಕರ್ತನ ಪ್ರಶ್ನೆಗೆ ನೀನು ಸಭ್ಯ ತಂದೆ, ತಾಯಿಯ ಮಗನಾಗಿದ್ದರೆ ಈ ರೀತಿಯ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದ ರಾಮ್ ದೇವ್

    ಹರಿಯಾಣ : ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಯೋಗ ಗುರು ರಾಮ್ ದೇವ್ ಅವರಿಗೆ ಪತ್ರಕರ್ತರೊಬ್ಬರು ಕೇಳಿದ್ದ ಪ್ರಶ್ನೆಗೆ ನೀನು ಸಭ್ಯ ತಂದೆ, ತಾಯಿಯ ಮಗನಾಗಿದ್ದರೆ ಈ ರೀತಿಯ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದು ಬಹಿರಂಗವಾಗಿ ಬೆದರಿಕೆಯೊಡ್ಡಿದ್ದಾರೆ.


    ಹರಿಯಾಣದ ಕರ್ನಾಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಜನರು ಲೀಟರ್‍ಗೆ ಪೆಟ್ರೋಲ್ 40ರೂ. ಮತ್ತು ಸಿಲಿಂಡರ್ 300 ರೂ. ಬೆಲೆಯನ್ನು ನಿಗದಿಪಡಿಸುವ ಸರ್ಕಾರವನ್ನು ಪರಿಗಣಿಸಬೇಕು ಎಂದು ನೀವು ಈ ಹಿಂದೆ ಹೇಳಿದ್ರಿ ಎಂದು ಪ್ರಶ್ನಿಸಿದ್ದಾರೆ.

    ಇದಕ್ಕೆ ಪ್ರತಿಯಾಗಿ ಯೋಗ ಗುರು ರಾಮದೇವ್ ಅವರು, ಹೌದು ನಾನು ಹೇಳಿದ್ದೆ, ಈಗ ನೀವು ಏನು ಮಾಡಬಹುದು? ಇಂತಹ ಪ್ರಶ್ನೆಗಳನ್ನು ಕೇಳತ್ತಾ ಇರಬೇಡಿ. ನಿಮ್ಮ ಪ್ರಶ್ನಿಗಳಿಗೆಲ್ಲಾ ಉತ್ತರಿಸುತ್ತಾ ಇರಲು ನಾನು ಗುತ್ತಿಗೆದಾರನಲ್ಲ ಎಂದಿದ್ದಾರೆ. ಮತ್ತೊಮ್ಮೆ ಇದೇ ಪ್ರಶ್ನೆಯನ್ನು ಕೇಳಿದಾಗ, ನಾನು ಹೇಳಿಕೆ ನೀಡಿದ್ದೇನೆ, ಅದಕ್ಕೆ ಈಗ ನೀವು ಏನು ಮಾಡುತ್ತೀರಾ? ಬಾಯಿ ಮುಚ್ಚು, ಸುಮ್ಮನೆ ನೀವು ಮತ್ತೆ, ಮತ್ತೆ ಇದೇ ಪ್ರಶ್ನೆ ಕೇಳುತ್ತಿದ್ದರೆ, ಅದು ಸರಿ ಇರುವುದುಲ್ಲ. ನೀನು ಸಭ್ಯ ತಂದೆ, ತಾಯಿಯ ಮಗನಾಗಿರದ್ದರೆ, ಈ ರೀತಿ ಮಾತನಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಇಂಧನ ಬೆಲೆ ಕಡಿಮೆಯಾದರೆ, ತೆರಿಗೆ ಪಡೆಯುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ತೆರಿಗೆ ಇಲ್ಲದೇ ಅವರು ದೇಶವನ್ನು ಹೇಗೆ ನಡೆಸುತ್ತಾರೆ, ಸಂಬಳವನ್ನು ಹೇಗೆ ಪಾವತಿಸುತ್ತಾರೆ, ರಸ್ತೆಗಳನ್ನು ಹೇಗೆ ನಿರ್ಮಿಸುತ್ತಾರೆ? ಹೌದು, ಹಣದುಬ್ಬರ ಕಡಿಮೆಯಾಗಬೇಕು, ನಾನು ಒಪ್ಪುತ್ತೇನೆ. ಆದರೆ ಜನರು ಕಷ್ಟಪಟ್ಟು ಕೆಲಸ ಮಾಡಬೇಕು. ನಾನು ಕೂಡ ಬೆಳಗ್ಗೆ 4 ಗಂಟೆಗೆ ಎದ್ದು ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತೇನೆ. ಕಷ್ಟದ ಸಮಯದಲ್ಲಿ ಜನರು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಸುತ್ತಲೂ ಕುಳಿತಿದ್ದ ಅವರ ಬೆಂಬಲಿಗರು ರಾಮ್‍ದೇವ್ ಅವರ ಮಾತಿಗೆ ಚಪ್ಪಾಳೆ ತಟ್ಟಿದರು.

    Share Information
    Advertisement
    Click to comment

    You must be logged in to post a comment Login

    Leave a Reply