FILM
ಖಾಸಗಿ ವಿಡಿಯೋ ವೈರಲ್ ಬಳಿಕ ಮೊದಲ ಬಾರಿಗೆ ನಟಿ ಶೃತಿ ನಾರಾಯಣನ್ ರಿಯಾಕ್ಷನ್ – ನಿಮ್ಮ ತಾಯಿ, ತಂಗಿ ಕೂಡ ನನ್ನಂತೆಯೇ ಹೆಣ್ಣು ಅವರ ವಿಡಿಯೋ ನೋಡಿ ಖುಷಿಪಡಿ

ಚೆನ್ನೈ ಮಾರ್ಚ್ 28: ತನ್ನ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಇದೀಗ ಮೊದಲ ಬಾರಿಗೆ ವಿಡಿಯೋ ಕುರಿತಂತೆ ನಟಿ ರಿಯಾಕ್ಷನ್ ನೀಡಿದ್ದು, ನಿಮ್ಮ ತಾಯಿ, ತಂಗಿ ಕೂಡ ನನ್ನಂತೆಯೇ ಹೆಣ್ಣು ಅವರ ವಿಡಿಯೋ ನೋಡಿ ಖುಷಿಪಡಿ ಎಂದು ನಟಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಮಾರು 14 ನಿಮಿಷಗಳ ನಟಿಯ ಖಾಸಗಿ ವಿಡಿಯೋ ವೈರಲ್ ಆಗಿದೆ. ತಮಿಳಿನಲ್ಲಿ ಕೆಲವು ಸಿರಿಯಲ್ ಹಾಗೂ ಸಿನೆಮಾಗಳಲ್ಲಿ ನಟಿಸಿರುವ ನಟಿ ಶೃತಿ ನಾರಾಯಣ್ ಅವರ ಕ್ಯಾಸ್ಟಿಂಗ್ ಕೌಚ್ ವಿಡಿಯೋ ಇದಾಗಿದೆ ಎಂದು ಹೇಳಲಾಗಿದೆ. ಆದರೆ ನಟಿ ಇದು ಎಐ ಬಳಿಸಿ ಮಾಡಿದ ವಿಡಿಯೋ ಎಂದು ಹೇಳಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ವಿಡಿಯೋ ಕುರಿತಂತೆ ರಿಯಾಕ್ಷನ್ ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಅವರು ಇದೀಗ ಹರಿದಾಡುತ್ತಿರುವ ವಿಚಾರ ನಿಮಗೆ ಜೋಕ್ ಅಥವಾ ತಮಾಷೆ ಆಗಿರಬಹುದು. ಆದರೆ ನನಗೆ ನನ್ನ ಕುಟುಂಬಕ್ಕೆ ಇದು ಕಷ್ಟಕರ ಸಂದರ್ಭವಾಗಿದೆ. ಅದರಲ್ಲೂ ನನಗೆ ಇದನ್ನು ನಿಭಾಯಿಸೋದು ಕಷ್ಟಕರವಾಗಿದೆ ಎಂದಿದ್ದಾರೆ. ನಾನು ಒಬ್ಬಳು ಹುಡುಗಿ, ನನಗೂ ಭಾವನೆಗಳಿವೆ. ನನ್ನ ಆಪ್ತರಿಗೂ ಭಾವನೆಗಳಿವೆ. ಅದಕ್ಕೆ ಬೆಲೆ ಕೊಡಿ. ನೀವೆಲ್ಲಾ ಇದನ್ನು ಮತ್ತಷ್ಟು ಕೆಟ್ಟದಾಗಿ ಮಾಡುತ್ತಿದ್ದೀರಿ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಆ ವಿಡಿಯೋಗಳನ್ನು ಕಾಡ್ಗಿಚ್ಚಿನಂತೆ ಹಬ್ಬಿಸಬೇಡಿ. ಒಂದು ವೇಳೆ ನೀವು ಹಾಗೆಯೇ ಮಾಡಬೇಕು ಎಂದಿದ್ರೆ, ನಿಮ್ಮ ತಾಯಿ, ಗರ್ಲ್‌ಫ್ರೆಂಡ್, ಸಹೋದರಿ ವಿಡಿಯೋಗಳನ್ನು ವೈರಲ್ ಮಾಡಿ. ಅವರು ಕೂಡ ನನ್ನ ಹಾಗೆಯೇ ದೇಹವನ್ನು ಹೊಂದಿದ್ದಾರೆ. ಹಾಗಾಗಿ ಅವರ ವಿಡಿಯೋ ನೋಡಿ ಖುಷಿಪಡಿ ಎಂದು ಖಡಕ್ ಆಗಿ ಶೃತಿ ನಾರಾಯಣನ್ ಬರೆದುಕೊಂಡಿದ್ದಾರೆ.
ಲೀಕ್ ಆದ ಕೌಸ್ಟಿಂಗ್ ಕೌಚ್ ವಿಡಿಯೋವನ್ನು ನಟಿ ಎಐ ವಿಡಿಯೋ ಎಂದು ಪರೋಕ್ಷವಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದು ರಿಯಲ್ ವಿಡಿಯೋ ಅಲ್ಲ, ಎಂಬುದು ನಟಿಯ ವಾದ.
1 Comment