LATEST NEWS
ಕರಾವಳಿಯನ್ನು ನಾವು ದತ್ತು ತೆಗೆದುಕೊಂಡಿದ್ದೆವೆ – ಶೋಭಾ ಕರಂದ್ಲಾಜೆ

ಉಡುಪಿ ನವೆಂಬರ್ 30: ಕರಾವಳಿ ಜಿಲ್ಲೆಗಳಲ್ಲಿ ನಮ್ಮ ಶಾಸಕರೇ ಇದ್ದು ದತ್ತು ತೆಗೆದುಕೊಂಡು ಅಭಿವೃದ್ದಿ ಮಾಡುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಕರಾವಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಟ ನಡೆಯಲ್ಲ, ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ. ಕರ್ನಾಟಕ, ಕರಾವಳಿ ಜಿಲ್ಲೆಗಳು ನಮ್ಮದೇ. ಉಡುಪಿಯ ಐವರು ಶಾಸಕರು ಬಿಜೆಪಿಯವರೇ. ಈ ಭಾಗವನ್ನು ದತ್ತು ತಗೊಳ್ತೇವೆ, ಅಭಿವೃದ್ಧಿನೂ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಜನವಿರೋಧಿ ನೀತಿಗೆ ಕರಾವಳಿ ಜನ ತಕ್ಕ ಪಾಠ ಕಲಿಸಿದ್ದಾರೆ. ಡಿಕೆ ಶಿವಕುಮಾರ್ ಯಾವ ಆಟವೂ ಕರಾವಳಿಯಲ್ಲಿ ನಡೆಯಲ್ಲ. ದೇವರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಾ ಇಲ್ಲ. ನಾವು ದೇವರ ಪರ ನಿಂತವರು. ಡಿಕೆಶಿ ಚುನಾವಣೆ ಬಂದಾಗ ದೇವಸ್ಥಾನ ತಿರುಗುತ್ತಾರೆ. ರಾಹುಲ್ ಗಾಂಧಿ ಚುನಾವಣೆ ಬಂದ್ರೆ ಮಾನಸ ಸರೋವರ, ಕೇದಾರ, ಕೈಲಾಸಕ್ಕೆ ಹೋಗ್ತಾರೆ. ಉಳಿದ ದಿನಗಳಲ್ಲಿ ಚರ್ಚ್ ಗೆ ಹೋಗ್ತಾರೆ ಇದು ಅವರ ನೀತಿ ಎಂದು ಕಿಡಿಕಾರಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಶೋಭಾ, ನಿಮಗೆ ಗೊತ್ತಿರುವ ಮಾಹಿತಿ ಮೊದಲು ಬಹಿರಂಗಪಡಿಸಿ. ಬುಟ್ಟಿಯಲ್ಲಿ ಹಾವಿದೆ ಎಂದು ಹೆದರಿಸುವುದನ್ನು ಬಿಡಿ. ಸಾಧ್ಯವಿದ್ದರೆ ಆ ಹಾವನ್ನು ಹೊರಗೆ ಬಿಡಿ. ಈ ಪ್ರಕರಣದಲ್ಲಿ ನಿಮ್ಮ ಷಡ್ಯಂತ್ರ ಏನಾದರೂ ಇದೆಯಾ? ನಮ್ಮ ನಾಯಕರ ವಿರುದ್ಧ ಏನು ಷಡ್ಯಂತ್ರ ಮಾಡಿದ್ದೀರಿ ಮೊದಲ ಸ್ಪಷ್ಟಪಡಿಸಿ. ಯಾವ ಹಾವನ್ನು ಬಿಡ್ತೀರೋ ಕಾದು ನೋಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ.