Connect with us

LATEST NEWS

ಪಡುಬಿದ್ರಿಯಲ್ಲಿ ಮಾರಾಕಾಯುಧದಿಂದ ಅಟ್ಟಾಡಿಸಿ ದಾಳಿ…ಯುವಕನ ಸ್ಥಿತಿ ಗಂಭೀರ..

ಉಡುಪಿ ನವೆಂಬರ್ 30: ಕರಾವಳಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚುತ್ತಲೇ ಇದ್ದು, ಕರಾವಳಿಯ ಎರಡು ಜಿಲ್ಲೆಗಳಲ್ಲಿ ಗ್ಯಾಂಗ್ ವಾರ್ ಗಳು ಮತ್ತೆ ಪಾರಂಭವಾಗಿದೆ.


ಉಡುಪಿಯ ಪಡುಬಿದ್ರಿಯಲ್ಲಿ ಯುವಕನೋರ್ವನನ್ನು ತಂಡವೊಂದು ಅಟ್ಟಾಡಿಸಿ ಮಾರಾಕಾಯುಧದಿಂದ ಹಲ್ಲೆ ನಡೆಸಿದ ಪರಿಣಾಮ ಗಾಯಾಳು ಯುವಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾನೆ. ಗಾಯಾಳು ಯುವಕ ಮೂಲತಃ ಕೃಷ್ಣಾಪುರದ ನಿವಾಸಿ ಉಮ್ಮಾರ್ ಫಾರೂಕ್(26) ಎಂದು ಗುರುತಿಸಲಾಗಿದೆ.


ಈತ ಈ ಹಿಂದೆ ಪಡುಬಿದ್ರಿಯ ಕಂಚಿನಡ್ಕ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಕೆಲವೊಂದು ಹೊಡೆದಾಟ ಪ್ರಕರಣದಲ್ಲೂ ಗುರುತಿಸಿಕೊಂಡಿದ್ದ, ಈತನನ್ನು ಭಾನುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಮಾರಾಕಾಯುಧ ಹಿಡಿದುಕೊಂಡು ಬಂದ ಮೂವರ ತಂಡ ಅಟ್ಟಾಡಿಸಿ ಹಲ್ಲೆ ನಡೆಸಿದ್ದು, ಜೀವ ಭಯದಿಂದ ಫಾರೂಕ್ ಪಡುಬಿದ್ರಿ ಆಭರಣ ಜುವೆಲ್ಲರ್ಸ್ ಪಕ್ಕದ ಟೈಲರ್ ಅಂಗಡಿಗೆ ನುಗ್ಗಿದರೂ ಬೆನ್ನು ಬಿಡದ ಆರೋಪಿಗಳು ಅಂಗಡಿಯೋಳಗೂ ನುಗ್ಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಜೀವನ್ಮರಣ ಹೋರಾಟದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಚಿನಡ್ಕ ಪ್ರದೇಶದಲ್ಲಿ ನಿರಂತರವಾಗಿ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದಲೇ ಪದೇ ಪದೇ ಇಂಥಹ ಘಟನೆಗಳು ಮರುಕಳಿಸುತ್ತಿದೆ ಎಂಬುದಾಗಿ ಜನ ಆತಂಕ ವ್ಯಕ್ತ ಪಡಿಸಿದ್ದಾರೆ

Facebook Comments

comments