LATEST NEWS
ಸಂಸದೆ ಶೋಭಾ ಕರಂದ್ಲಾಜೆ ಹೆಸರಲ್ಲಿ ನಕಲಿ ಟ್ವೀಟ್…..ಏಕಿ ಮಿನಿಟ್ ಎಂದು ಕಾಲೇಳೆದ ಖಾದರ್

ಸಂಸದೆ ಶೋಭಾ ಕರಂದ್ಲಾಜೆ ಹೆಸರಲ್ಲಿ ನಕಲಿ ಟ್ವೀಟ್…..ಏಕಿ ಮಿನಿಟ್ ಎಂದು ಕಾಲೇಳೆದ ಖಾದರ್
ಮಂಗಳೂರು ಮೇ.24: ಇಂದು ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಮೃತಪಟ್ಟದ ನಿಶಾಂತ್ ಎಂಬ ಯುವಕನ ಕುರಿತ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ನಕಲಿ ಟ್ವೀಟ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಜಿ ಶಾಸಕ ಯು.ಟಿ ಖಾದರ್ ಸಂಸದೆ ಶೋಭಾ ಕರಂದ್ಲಾಜೆಯ ಅವರ ನಕಲಿ ಟ್ವಿಟ್ ವಿರುದ್ದ ಕಿಡಿಕಾರಿದ್ದಾರೆ.
ಇಂದು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿ ನಿಶಾಂತ್ ಎಂಬ ಹೆಸರಿನ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭ ನೇತ್ರಾವತಿ ನದಿಗೆ ನಿಶಾಂತ್ ಹಾರುವ ವೇಳೆ ನೋಡಿದ ಕೆಲ ಮುಸ್ಲಿಂ ಯುವಕರು ನಿಶಾಂತ್‌ನನ್ನು ರಕ್ಷಿಸಲು ಕೂಡಲೇ ನದಿಗೆ ಹಾರಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆಗೆ ಸ್ಪಂಧಿಸದೆ ನಿಶಾಂತ್ ಸಾವನ್ನಪ್ಪಿದ್ದಾನೆ.

ಈ ಘಟನೆಯ ಪೋಟೋ ಒಂದನ್ನು ಯಾರೊ ಕಿಡಿಗೇಡಿಗಳು ರಿ ಎಡಿಟ್ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಧಿಕೃತ ಟ್ವೀಟ್ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಈ ವೈರಲ್ ಆದ ಟ್ವೀಟ್ ನ್ನು ನೋಡಿ ಮಾಜಿ ಸಚಿವ ಶಾಸಕ ಯು.ಟಿ ಖಾದರ್ ಸಂಸದೆ ಶೋಭಾ ಕರಂದ್ಲಾಜೆ ಅವರ ಕಾಲೆಳೆದಿದ್ದಾರೆ. ನಿಮ್ಮ ಹೆಸರಿನ ಟ್ವೀಟ್ ಓಡಾಡ್ತಾ ಇದೆ ಟ್ವೀಟ್ನ ಸತ್ಯಾಸತ್ಯತೇ ಬಗ್ಗೆ ನೀವೇ ಹೇಳ ಬೇಕು.ನೀವೋ ಅಥವಾ ನಿಮ್ಮ ಭಕ್ತರೋ ಯಾರೇ ಇರಲಿ.ಆತ್ಮಹತ್ಯೆ ವಿಚಾರ ನೇರವಾಗಿ ಅಮಿತ್ ಶಾ ಹೇಳಿದ್ದು ಗ್ರೇಟ್ ಮಾರ್ರೇ..ಷೇ…ಹಾಗೇ ಏಕಿ ಮಿನಿಟ್ ಟೈಮ್ ತಗೊಂಡು ಲಾಕ್ ಡೌನ್ ಇಂದ ಒದ್ದಾಡುತ್ತಿರೋ ರಾಜ್ಯದ ಬಡವರು ಶ್ರಮಿಕರಿಗೆ ಬೇಗ ಹಣ ಬಿಡುಗಡೆ ಮಾಡಿ ಅಂತಾ ಹೇಳಿದ್ರೆ ಒಳ್ಳೆದಿತ್ತಾ ಅಂತಾ..? ಎಂದು ಕಾಲೆಳೆದಿದ್ದಾರೆ.
ಇನ್ನು ಈ ನಕಲಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ನಾನು ಈ ರೀತಿಯ ಯಾವುದೇ ಹೇಳಿಕೆ ಅಥವಾ ಟ್ವೀಟ್ ಮಾಡಿರುವುದಿಲ್ಲ, ಎಡಿಟೆಡ್ ಟ್ವೀಟನ್ನು ನನ್ನದೆಂದು ಬಿಂಬಿಸಲು ಪ್ರಯತ್ನಿಸಿರುತ್ತಾರೆ.
ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾಥ್ ನೀಡುವ & ಸಾರ್ವಜನಿಕ ವಲಯದಲ್ಲಿ ವದಂತಿಗಳ ಮೂಲಕ ಸಾಮರಸ್ಯ-ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಕಮಿಷನರ್ ಸೂಚಿಸಿದ್ದೆನೆ ಎಂದು ತಿಳಿಸಿದ್ದಾರೆ.