FILM
ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವರಾಜ್ ಕುಮಾರ್
ಬೆಂಗಳೂರು: ಐಪಿಎಲ್ ಸಂಭ್ರಮ ಆರಂಭವಾಗುತ್ತಿದ್ದಂತೆ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಟಗರಿಗೆ ಹೋಲಿಸಿದ್ದಾರೆ.
ನಾಳೆಯಿಂದ ಐಪಿಎಲ್ ಹಂಗಾಮ ಆರಂಭವಾಗಲಿದೆ. ಐಪಿಎಲ್ ಆಡಲು ಆರ್‌ಸಿಬಿ ತಂಡ ಕೂಡ ಯುಎಇಯಲ್ಲಿ ಭರ್ಜರಿ ಸಿದ್ಧತೆ ನಡೆಸಿದೆ. ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಬೆಂಗಳೂರು ತಂಡ ಕಾತುರದಿಂದ ಕಾಯುತ್ತಿದೆ. ಈ ಮಧ್ಯೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಮಾತನಾಡಿರುವ ಶಿವಣ್ಣ ಕೊಹ್ಲಿಯನ್ನು ಹೊಗಳಿದ್ದಾರೆ.
ಎನರ್ಜಿಗೆ ಇನ್ನೊಂದು ಹೆಸರು ನಮ್ಮ ಹ್ಯಾಟ್ರಿಕ್ ಹೀರೋ @NimmaShivanna
ಸ್ಯಾಂಡಲ್ ವುಡ್ ಟಗರು ಜತೆ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಮಾತುಕತೆ.
ವೀಕ್ಷಿಸಿ 👉 ಹರಟೆ ವಿತ್ ಹ್ಯಾಟ್ರಿಕ್ ಹೀರೋ
ನಾಳೆ ಬೆಳಗ್ಗೆ 10.30, ಸಂಜೆ 6.30 ಹಾಗೂ ರಾತ್ರಿ 11.30ಕ್ಕೆ,, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ📺 pic.twitter.com/TuWXf2LUAo
— Star Sports Kannada (@StarSportsKan) September 17, 2020
ಮಾಜಿ ಕ್ರಿಕೆಟ್ ಆಟಗಾರ ಕನ್ನಡಿಗ ವಿಜಯ್ ಭಾರದ್ವಾಜ್ ಅವರ ಜೊತೆ ಶಿವಣ್ಣ ಮಾತನಾಡಿದ್ದಾರೆ. ಎನರ್ಜಿಗೆ ಇನ್ನೊಂದು ಹೆಸರು ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಸ್ಯಾಂಡಲ್‍ವುಡ್ ಟಗರು ಜೊತೆ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಮಾತುಕತೆ ಎಂದು ಬರೆದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಿಡಿಯೋವನ್ನು ಶೇರ್ ಮಾಡಿದೆ.
ಈ ವಿಡಿಯೋದಲ್ಲಿ ಮಾತನಾಡಿರುವ ಶಿವಣ್ಣ ಕ್ರಿಕೆಟ್ ಎಂಬುದು ಒಂದು ಟ್ರಿಕ್ಕಿ ಗೇಮ್. ಕ್ರಿಸ್ ಗೇಲ್ ಅವರು ಒಂದು ಸೀಸನ್‍ನಲ್ಲಿ ಹೊಡೆದು ಹೊಡೆದು ಸಿಕ್ಸ್ ಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಒಂಥರ ಟಗರು ಇದ್ದಂತೆ, ಆ ಆಟಿಟ್ಯೂಡ್ ಅವರಿಗಿದೆ ಎಂದಿದ್ದಾರೆ. ಜೊತೆಗೆ ತಮ್ಮ ಕ್ರಿಕೆಟ್ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. ಧೋನಿ ನೋಡಲು ಮಾಸ್ ಆಗಿ ಕಾಣುತ್ತಾರೆ. ಆತನಲ್ಲಿ ಶಾಂತಿ ಮತ್ತು ಕ್ರಾಂತಿಯ ಗುಣಗಳು ಎರಡು ಇದೆ ಎಂದು ಹೇಳಿ ಹೊಗಳಿದರು.

ಇದೇ ವೇಳೆ ಬೌಲರ್ ಗಳಲ್ಲಿ ಪಾಕಿಸ್ತಾನ ವಾಸಿಮ್ ಅಕ್ರಮ್ ಅವರನ್ನು ನೆನಪಿಸಿಕೊಂಡ ಶಿವಣ್ಣ, ಅವರು ಜಿಂಕೆ ರೀತಿಯಲ್ಲಿ ಓಡಿ ಬಂದು ಬೌಲ್ ಮಾಡುತ್ತಾರೆ. ಅವರ ಓಟದ ಶೈಲಿ ಬಹಳ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನಮ್ಮ ಜೀವನ ಇಷ್ಟೇ ಎಂದು ಸಾಯಬಾರದು, ಹೋರಾಡಬೇಕು. ನಾನು ಯಾವತ್ತು ಇನ್ನೊಬ್ಬರನ್ನು ನೋಡಿ ಹೊಟ್ಟೆ ಉರಿದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.
Facebook Comments
You may like
-
4ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ರೋಚಕ ಗೆಲವು – ಸರಣಿ ಗೆದ್ದ ಭಾರತ
-
ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಸೀನಿಯರ್ಸ್ ತಂಡಕ್ಕೆ
-
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎದೆನೋವು : ಆಸ್ಪತ್ರೆಗೆ ದಾಖಲು
-
ಆಸ್ಟ್ರೇಲಿಯಾ ವಿರುದ್ದ 8 ವಿಕೆಟ್ಗಳ ಜಯ ಸಾಧಿಸಿದ ಭಾರತ
-
ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭಿಕ ಬ್ಯಾಟ್ಸಮನ್ ಚೇತೇಶ್ವರ ಪೂಜಾರ 100 ಎಸೆತಗಳಲ್ಲಿ ಗಳಿಸಿದ್ದು 18 ರನ್
-
ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕಠಿಣ – ಇಂದಿನ ಪಂದ್ಯದ ಬಗ್ಗೆ ಕಿಚ್ಚ ಸುದೀಪನ ಮಾತು
You must be logged in to post a comment Login