Connect with us

KARNATAKA

ಶಿವಪುರ: ಕಾರ್ ಪಲ್ಟಿ ಪ್ರಾಣಾಪಾಯದಿಂದ ಪಾರು

ವಿಜಯನಗರ, ಮಾರ್ಚ್ 12: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ಧಾರಿ50ರಲ್ಲಿ, ಕಾರ್ ಪಲ್ಟಿಯಾಗಿದ್ದು ಅದೃಷ್ಟ ವಶಾತ್ ಪವಾಡ ಸದೃಶದಂತೆ ಯಾರೀಗೂ ಪ್ರಾಣಾಪಾಯವಾಗಿಲ್ಲ.

ಗಂಗಾವತಿ ಮೂಲದ ವೈದ್ಯರಾಗಿರುವ ಕಾರ್ ಪ್ರಯಾಣಿಕರು ತಮ್ಮ ಕುಟುಂಬ ಸದಸ್ಯರ ಸಮೇತ, ಬೆಂಗಳೂರಿಗೆ ತೆರಳಿ ಬೆಂಗಳೂರಿನಿಂದ ಮರಳಿ ಗಂಗಾವತಿಗೆ ತೆರಳುತಿದ್ದಾಗ ಕಾರ್ ಸೆಲ್ಪ್ ಸ್ಕಿಡ್ ಆಗಿ ಪಲ್ಟಿಯಾಗಿದೆ. ಕಾರ್ ರಬಸವಾಗಿ ಚಲಸುತಿದ್ದಾಗ ಆಕಸ್ಮಿಕವಾಗಿ ಪಲ್ಟಿಯಾಗಿದ್ದು, ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು ರಸ್ತೆ ವಿಭಜಕವನ್ನು ದಾಟಿ ಮತ್ತೊಂದು ರಸ್ತೆಗೆ ಹಾರಿದೆ.

ಈ ಸಂದರ್ಭದಲ್ಲಿ ಕಾರ್ ನಲ್ಲಿದ್ದ ಇಬ್ಬರು ವೃದ್ಧ ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಕೂಡ್ಲಿಗಿ 108 ಆಂಬುಲೆನ್ಸ್ ಸಿಬ್ಬಂದಿ ಮಾರೇಶ್ ಹಾಗೂ ಯಾರೀಸ್ ರವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ.