LATEST NEWS
ಮಾನಸಿಕ ಖಿನ್ನತೆ: ಹಿರಿಯ ನಾಗರಿಕ ಆತ್ಮಹತ್ಯೆಗೆ ಶರಣು
ಉಡುಪಿ, ಮಾರ್ಚ್ 12 : ಹಿರಿಯ ನಾಗರಿಕರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂತೆಕಟ್ಟೆ ಗೋಪಾಲಪುರದಲ್ಲಿ ನಡೆದಿರುವುದು ಶುಕ್ರವಾರ ನಸುಕಿನ ಜಾವದಲ್ಲಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಅರುಣ್ ಶೆಟ್ಟಿ(74) ಎಂದು ಗುರುತಿಸಲಾಗಿದ್ದು.ಇವರು ಇಲ್ಲಿಯ ದಿವ್ಯ ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದರು. ವಸತಿ ಸಂಕೀರ್ಣದ ರೂಪ್ ಟಾಪ್ ನಲ್ಲಿ ಮಾನಸಿಕ ಖಿನ್ನತೆ ಇಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಥಾಪ್ರಕಾರ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಉಚಿತ ಅಂಬುಲೆನ್ಸ್ ಸೇವೆ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.