Connect with us

    FILM

    ಶಿವಣ್ಣ ನಟನೆಯ ‘ಘೋಸ್ಟ್’ ಒಟಿಟಿಗೆ; ಬರೋಬ್ಬರಿ 10,000 ಅಡಿ ಪೋಸ್ಟರ್ ಲಾಂಚ್ ಮಾಡಿ ದಾಖಲೆ ನಿರ್ಮಿಸಿದ ಜೀ5..!

    ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಲಾಗಿದೆ. ಬೆಂಗಳೂರಿನ ಜಯನಗರದ ಎಂಇಎಸ್ ಗ್ರೌಂಡ್​ನಲ್ಲಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ

    ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಒಟಿಟಿ ವ್ಯಾಪ್ತಿ ಹಿರಿದಾಗಿದ್ದು ಅನೇಕರು ಈ ವೇದಿಕೆಗೆ ಬರುತ್ತಿದ್ದಾರೆ. ಇದೇ ಮಾದರಿಗೆ ಜೀ5 ಕೂಡ ಸೇರ್ಪಡೆಗೊಳ್ಳುತ್ತಿದ್ದು ಕನ್ನಡದ ಹಲವು ಸಿನಿಮಾಗಳು ರಿಲೀಸ್ ಈ ZEE5 ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿದ್ದು. ಕನ್ನಡದ ಹ್ಯಾಟ್ರೀಕ್ ಹೀರೋ ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಕೂಡ ZEE5 ನಲ್ಲಿ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆಯುತ್ತಿದೆ.


    ಶಿವರಾಜ್​ಕುಮಾರ್ ನಟನೆಯ, ಶ್ರೀನಿ ನಿರ್ದೇಶನದ ‘ಘೋಸ್ಟ್’ ಥಿಯೇಟರ್​ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಇದೀಗ ಒಟಿಟಿಗೆ ಕಾಲಿಟ್ಟಿದೆ. ನವೆಂಬರ್ 17ರಂದು ಜೀ5 ನಲ್ಲಿ ಬಿಡುಗಡೆ ಆಗಿದ್ದು ಚಿತ್ರಕ್ಕೆ ಪ್ರೇಕ್ಷಕನ್ನ ಸೆಳೆಯಲು ಜೀ5 ಕಡೆಯಿಂದ ಹೊಸ ಪ್ರಯತ್ನ ಮಾಡಲಾಗಿದೆ. ಬರೋಬ್ಬರಿ 10 ಸಾವಿರ ಅಡಿಯ ‘ಘೋಸ್ಟ್’ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಪ್ರಚಾರಕ್ಕೆ ಇಷ್ಟು ದೊಡ್ಡ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.


    ಥಿಯೇಟರ್‌ಗಳಲ್ಲಿ ರಿಲೀಸ್ ಆಗುವ ಚಿತ್ರಗಳಿಗೆ ಬ್ಯಾನರ್, ಪೋಸ್ಟರ್ ಹಾಕುವುದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಲಾಗಿದೆ. ಬೆಂಗಳೂರಿನ ಜಯನಗರದ ಎಂಇಎಸ್ ಗ್ರೌಂಡ್​ನಲ್ಲಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ.‘ಘೋಸ್ಟ್’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಎರಡು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದೇಶ್​ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ‘ಘೋಸ್ಟ್’ ಸಿನಿಮಾ ಸಿದ್ಧವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರದಲ್ಲಿ ಬಿಡುಗಡೆ ಆಗಿದೆ. ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಇದೆ. ಜಯರಾಮ್‌, ಅನುಪಮ್‌ ಖೇರ್‌, ಅರ್ಚನಾ ಜೋಯಿಸ್‌, ಸತ್ಯಪ್ರಕಾಶ್‌ ಮೊದಲಾದವರು ನಟಿಸಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು, ಥಿಯೇಟರ್​ನಲ್ಲಿ ಒಮ್ಮೆ ನೋಡಿ ಮತ್ತೊಮ್ಮೆ ವೀಕ್ಷಿಸಬೇಕು ಎಂದುಕೊಂಡವರು ‘ಘೋಸ್ಟ್’ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *