Connect with us

BANTWAL

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವರ ‘ಶ್ರೀ ವಿಶ್ವರೂಪದರ್ಶನ’,ಪುಣೀತರಾದ ಭಕ್ತಗಣ

ಬಂಟ್ವಾಳ: ಮಲ್ಲಿಗೆ ಪ್ರಿಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವರ ಸಾನಿಧ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ 22 ನೇ ವರ್ಷದ “ಶ್ರೀ ವಿಶ್ವರೂಪದರ್ಶನ” ವು ಆದಿತ್ಯವಾರ ಪ್ರಾತಃಕಾಲ 4.00 ಗಂಟೆಯ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯಿತು.

ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ ಅವರು ದೇವರ ಸಾನಿಧ್ಯದಲ್ಲಿರುವ ತುಳಸಿಕಟ್ಟೆಯಲ್ಲಿ ದೀಪಪ್ರಜ್ವಲನಗೈಯುತ್ತಿದ್ದಂತೆ ದೇವಳದ ಹೊರಾಂಗಣ ,ಒಳಾಂಗಣದಲ್ಲಿ ಅಳವಡಿಸಲಾದ ಹಣತೆಯನ್ನು ಸೇರಿದ್ದ ಭಕ್ತಸಮೂಹ ಏಕಕಾಲದಲ್ಲಿ ಬೆಳಗಿದರು.


ದೇವಳ ಪ್ರವೇಶಿಸುವ ದ್ವಾರದ ಮುಂಭಾಗ ಜೋಡಿಸಲಾದ ದೀಪದ ಓಂಕಾರ,ಗಣಪತಿ,ಶಂಖ,ಚಕ್ರ,ಗದಾ,ಪದ್ಮಾ,ಒಳಾಂಗಣದಲ್ಲಿ ಪುಪ್ಪಾಲಂಕಾರ ವಿಶೇಷ ಗಮನಸೆಳೆಯಿತು.
ಬಳಿಕ ದೇವರಿಗೆ ಕಾಕಡಾರತಿ, ಜಾಗರ ಪೂಜೆ,ಭಕ್ತರಿಗೆ ವಿಶೇಷಾಲಂಕಾರಗೊಂಡ ಶ್ರೀ ದೇವರದರ್ಶನ ಭಾಗ್ಯ , ಪ್ರಸಾದವಿತರಣೆಯು ನಡೆಯಿತು.ದೇವಳದ ಆಡಳಿತ ಮೊಕ್ತೇಸರರು,ಮೊಕ್ತೇಸರರು ಹಾಗೂ ಭಗವದ್ಬಕ್ತರು ಉಪಸ್ಥಿತರಿದ್ದರು.

ಬೆಳಗ್ಗೆ 7 ಗಂಟೆಯವರೆಗೂ ಭಕ್ತಾಧಿಗಳು ದೇವಳಲ್ಕಾಗಮಿಸಿ ವಿಶ್ವರೂಪದರ್ಶನವನ್ನು ವೀಕ್ಷಿಸಿ ಪುನೀತರಾದರು.

Share Information
Advertisement
Click to comment

You must be logged in to post a comment Login

Leave a Reply