Connect with us

LATEST NEWS

ಪೇಜಾವರ ಶ್ರೀ ಆಪ್ತರಿಗೆ ಬಿಸಿ ಮುಟ್ಟಿಸಿದ ಶಿರೂರು ಶ್ರೀ

ಪೇಜಾವರ ಶ್ರೀ ಆಪ್ತರಿಗೆ ಬಿಸಿ ಮುಟ್ಟಿಸಿದ ಶಿರೂರು ಶ್ರೀ

ಉಡುಪಿ ಜನವರಿ 19: ಶೀರೂರು ಲಕ್ಷ್ಮೀವರತೀರ್ಥ ಶ್ರೀ ಗಳು ಎರಡೂವರೆ ಎಕರೆ ಜಮೀನನ್ನು ನಾನು ಹಣಕೊಟ್ಟು ಖರೀದಿ ಮಾಡಿದ್ದೇನೆ. ರಥಬೀದಿ ವಾಹನ ಮುಕ್ತ ಮಾಡಿದಾಗ ಆಟೋ, ಕಾರು ಚಾಲಕರನ್ನು ಇಲ್ಲಿಗೆ ಕರೆದುಕೊಂಡು ಬಂದು ನೆಲೆ ಕೊಟ್ಟಿದ್ದೇನೆ. ಎಂಟೂ ಮಠದ ಸ್ವಾಮೀಜಿಗಳು ಹಣ ಕೊಟ್ಟು ಒಟ್ಟು ಐದೂವರೆ ಎಕರೆ ಜಮೀನು ಖರೀದಿ ಮಾಡಿದ್ದೇವೆ ಎಂದರು.

ಮಠದ ಜಮೀನಿನ ಪಾರ್ಕಿಂಗ್, ಮಳಿಗೆ ಹೆಸರಲ್ಲಿ ಅಷ್ಟ ಮಠಗಳ ಟ್ರಸ್ಟ್ ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು. ಪಾರ್ಕಿಂಗ್, ಅಂಗಡಿ ಹಣದಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗುತ್ತಿದ್ದು. ಪ್ರವಾಸಿಗರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ತಾನು ದಾನ ಕೊಟ್ಟ ಭೂಮಿಯಲ್ಲಿ ಅಕ್ರಮ ಸಹಿಸಲ್ಲ. ಕೃಷ್ಣಮಠಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ ಎಂದು ಶೀರೂರು ಲಕ್ಷ್ಮೀವರತೀರ್ಥ ಶ್ರೀ ಆಕ್ರೋಶ ಹೊರ ಹಾಕಿದರು.

ಕಳೆದ ಕೆಲವು ವರ್ಷಗಳಿಂದ ಅಕ್ರಮಗಳನ್ನು ನೋಡಿಯೂ ಏನೂ ಮಾಡಲಾಗದೆ ಸುಮ್ಮನಿದ್ದ ಉಡುಪಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ಇದೀಗ ಅಸಮಾಧಾನ ಹೊರಹಾಕಿದ್ದಾರೆ. ಬುಲ್ಡೋಜರ್ ಜೊತೆ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಬಂದ ಶೀರೂರು ಶ್ರೀ ಅಕ್ರಮ ಅಂಗಡಿ ಮಾಲೀಕರಿಗೆ ಚಳಿ ಬಿಡಿಸಿದರು.

ಯಾತ್ರಿ ನಿವಾಸ ಲಾಡ್ಜ್ ಕಚೇರಿಗೆ ಬಂದು ಕಡತಗಳನ್ನು ಜಾಲಾಡಿ ಸಿಬ್ಬಂದಿಗೆ ಚಳಿ ಬಿಡಿಸಿದರು. ಐಟಿ ದಾಳಿಗಿಂತ ನನ್ನ ದಾಳಿ ಪರಿಣಾಮಕಾರಿ, ಈಗ ಕಾರ್ಯಾಚರಣೆ ಮಾಡಿದ್ದು 5% ನಿಂದ 95% ಅಕ್ರಮದ ವಿರುದ್ಧ ನನ್ನ ಹೋರಾಟವಿದೆ ಎಂದು ಎಚ್ಚರಿಕೆ ನೀಡಿದರು. ಈ ಮೂಲಕ ಪೇಜಾವರಶ್ರೀ ಆಪ್ತರಿಗೆ ಬಿಸಿಮುಟ್ಟಿಸಿದರು.

ಪೇಜಾವರ ಸ್ವಾಮೀಜಿ ಜ್ಞಾನವೃದ್ಧರು, ವಯೋವೃದ್ಧರು ಅವರ ಪಕ್ಕದಲ್ಲೇ ಹೆಗ್ಗಣಗಳಿವೆ. ಅವುಗಳನ್ನು ಓಡಿಸಿದರೆ ಪೇಜಾವರಶ್ರೀ ಗಳ ಗೌರವ ಇನ್ನೂ ಹೆಚ್ಚಾಗುತ್ತದೆ. ಅವರ ಆಪ್ತರಿಂದಲೇ ಅನ್ಯಾಯವಾಗಿದೆ ಎಂದು ಶೀರೂರು ಸ್ವಾಮೀಜಿ ಆರೋಪಿಸಿದ್ದಾರೆ.
ಯಾವುದೇ ಪೂರ್ವಸೂಚನೆ ನೀಡದೇ ಕಟ್ಟಡ ತೆರವು ಮಾಡಿದ್ದರಿಂದ ಅಂಗಡಿ ಮತ್ತು ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಕೆಲಕಾಲ ಭೂಕಂಪವಾದ ಅನುಭವವಾದಂತಿತ್ತು. ಅಷ್ಟಮಠಗಳ ಟ್ರಸ್ಟ್ ಅಕ್ರಮದಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದಂತಾಗಿದೆ.