Connect with us

    UDUPI

    ‘ಮಹಾತ್ಮರ ಸ್ಮರಣೆಯಿಂದ ಉತ್ತಮ ಸಮಾಜ’: ನಳಿನ್ ಪ್ರದೀಪ್ ರಾವ್

    ‘ಮಹಾತ್ಮರ ಸ್ಮರಣೆಯಿಂದ ಉತ್ತಮ ಸಮಾಜ’: ನಳಿನ್ ಪ್ರದೀಪ್ ರಾವ್

    ಉಡುಪಿ, ಜನವರಿ 19: ಮಹಾತ್ಮರು, ಕವಿಗಳು , ಸಾಹಿತಿಗಳು, ಸತ್ಪುರುಷರು, ಯೋಗಿಗಳು ನಾಡಿನ ಸಂಸ್ಕøತಿ, ಧರ್ಮ,ವಿಚಾರಧಾರೆಗಳನ್ನು ಉಳಿಸಿ, ಬೆಳೆಸುವುದಕ್ಕಾಗಿ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ಹೇಳಿದರು.

    ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ಶತಮಾನೋತ್ತರ ಸುವರ್ಣ ಸಂಭ್ರಮ ಸಭಾಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಸಮಾಜದಲ್ಲಿ ಕಷ್ಟಕಾರ್ಪಣ್ಯ ಇದ್ದರೂ, ಒಳ್ಳೆಯ ತತ್ವ, ಆದರ್ಶ, ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಜೀವಿಸಬೇಕು.

    ಹುಟ್ಟುತ್ತಲೇ ಎಲ್ಲರೂ ಒಳ್ಳೆಯವರು , ಕೆಟ್ಟವರು ಆಗಿರುವುದಿಲ್ಲ;

    ನಮ್ಮ ಸುತ್ತಮುತ್ತಲ ಸಮಾಜ, ಘಟನೆಗಳು ನಮ್ಮನ್ನು ರೂಪುಗೊಳಿಸುತ್ತವೆ.

    ಉತ್ತಮರ ಮಾರ್ಗದರ್ಶನದಿಂದ ಭವಿಷ್ಯದಲ್ಲಿ ಅತ್ಯಮೂಲ್ಯವಾದ ಬದುಕು ಸಾಗಿಸಬಹುದು ಎಂದು ತೋರಿಸಿಕೊಟ್ಟವರು ಮಹಾಯೋಗಿ ವೇಮ ಎಂದು ಹೇಳಿದರು.

    ಸಜ್ಜನರ ಸಂಘದಿಂದ ಮಹಾಯೋಗಿಯಾದ ವೇಮನ ನಿದರ್ಶನ ನಮಗೆ ಮಾದರಿಯಾಗಲಿ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.

    ಸಾಹಿತಿ ಮೇಟಿ ಮುದಿಯಪ್ಪ ವಿಶೇಷ ಉಪನ್ಯಾಸ ನೀಡಿ, ಸರ್ವಜ್ಞನ ಸಮಕಾಲೀನರಾದ ವೇಮನು ಆಂಧ್ರಪ್ರದೇಶದ ಮನೆಮನಗಳಲ್ಲಿ ನೆಲೆನಿಂತ ವ್ಯಕ್ತಿ.

    ಬುದ್ಧ ಮೋಕ್ಷದ ಹುಡುಕಾಟದಲ್ಲಿ ಲೀನವಾದಂತೆ, ವೇಮನು ಪ್ರಪಂಚದ ಪರಮ ಸುಖವನ್ನು ಹುಡುಕುತ್ತಾ , ಸಮಾಜದ ಎಲ್ಲ ವರ್ಗದವರಿಗೆ ತತ್ವಾದರ್ಶಗಳನ್ನು ಬೋಧಿಸಿದ ಮಹಾನ್ ಯೋಗಿ ಎಂದು ವಿವರಿಸಿದರು.

    ಕಾರ್ಯಕ್ರಮದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ತಾಲೂಕು ಪಂಚಾಯತ್ ಸದಸ್ಯೆ ರಜನಿ ಅಂಚನ್ ಉಪಸ್ಥಿತರಿದ್ದರು.
    ಸಭಾ ಕಾರ್ಯಕ್ರಮ ಪೂರ್ವದಲ್ಲಿ ಅನುರಾಧ ಮಯ್ಯ, ಹಿಲಿಯಾಣ ಅವರಿಂದ ಗೀತ ಗಾಯನ ನಡೆಯಿತು.

     

    Share Information
    Advertisement
    Click to comment

    You must be logged in to post a comment Login

    Leave a Reply