LATEST NEWS
ಒಂದು ಕೋಟಿ ಕೊಟ್ಟಿದ್ರೆ ಮ್ಯಾಟರ್ ಫಿನಿಶ್ ಆಗ್ತಿತ್ತಾ ? ವೈರಲ್ ಆದ ಶಿರೂರು ಶ್ರೀಗಳ ವಾಟ್ಸ್ ಆಫ್ ಆಡಿಯೋ

ಒಂದು ಕೋಟಿ ಕೊಟ್ಟಿದ್ರೆ ಮ್ಯಾಟರ್ ಫಿನಿಶ್ ಆಗ್ತಿತ್ತಾ ? ವೈರಲ್ ಆದ ಶಿರೂರು ಶ್ರೀಗಳ ವಾಟ್ಸ್ ಆಫ್ ಆಡಿಯೋ
ಉಡುಪಿ ಜುಲೈ 21: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಸಾವಿನ ನಂತರ ಉಡುಪಿಯಲ್ಲಿ ಕ್ಷಣ ಕ್ಷಣವೂ ಕುತೂಹಲ ಮೂಡಿಸುವ ಘಟನೆಗಳು ನಡೆಯುತ್ತಲೆ ಇದೆ. ಶಿರೂರು ಶ್ರೀಗಳ ಅಸಹಜ ಸಾವಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶಿರೂರು ಶ್ರೀಗಳ ಮಾತುಕತೆಯ ಆಡಿಯೋ ಒಂದು ಬಿಡುಗಡೆಯಾಗಿದ್ದು ಅದು ಸದ್ಯ ವೈರಲ್ ಆಗಿದೆ.
ಈ ಆಡಿಯೋದಲ್ಲಿ ಶಿರೂರು ಸ್ವಾಮೀಜಿ ತುಳುವಿನಲ್ಲಿ ಮಾತನಾಡಿರೋ ವಾಟ್ಸ್ ಅಪ್ ಧ್ವನಿಯಿದ್ದು, ಇದರಲ್ಲಿ ಅಜ್ಜರಿಗೆ ಒಂದು ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್ ಆಗುತ್ತೆ. ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ…ಐವತ್ತು ಲಕ್ಷ ಅವರಿಗೆ ಕೊಡಬೇಕಂತೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಸೋದೆ ಸ್ವಾಮೀಜಿ ವಿಶ್ವವಲ್ಲಭ ತೀರ್ಥರ ಹೆಸರು ಉಲ್ಲೇಖಿಸಿ..ಅವರ ಎಂಟು ಸಾವಿರ ಭಕ್ತರಿಂದ ಪ್ರತಿಮನೆಯಿಂದ ಒಂದು ಪವನ್ ಚಿನ್ನ ಕೊಡ್ತಾರಂತೆ ಎಂಬ ಅಸ್ಪಷ್ಟ ಮಾಹಿತಿ ಇದೆ.

ಯಾವ ಸಂದರ್ಭದಲ್ಲಿ ಯಾರಿಗೆ ಈ ಆಡಿಯೋ ಕಳುಹಿಸಿದ್ದಾರೋ ಗೊತ್ತಿಲ್ಲ. ಆದ್ರೆ ಪಟ್ಟದ ದೇವರನ್ನು ಮರಳಿ ನೀಡುವ ವಿಚಾರದಲ್ಲಿ ವ್ಯವಹಾರ ಮಾತುಕತೆ ನಡೆದಿತ್ತಾ ಅನ್ನೂ ಸಂಶಯವಂತೂ ಮೂಡುತ್ತೆ. ಅಥವಾ ಯಾವುದೊ ಮಹತ್ವದ ಯೋಜನೆಗೆ ಹಣ ಸಂಗ್ರಹಿಸುವ ಬಗ್ಗೆ ನಡೆದ ಮಾತುಕತೆಯೋ ಸ್ಪಷ್ಟವಾಗಿಲ್ಲ. ಆಡಿಯೊದ ಮೂಲ ತನಿಖೆ ಮಾಡಿದ್ರೆ ಸಾಕಷ್ಟು ವಿಚಾರ ಬೆಳಕಿಗೆ ಬರಬಹುದು.
ಶಿರೂರು ಶ್ರೀ ವಾಟ್ಸಾಪ್ ವಾಯ್ಸ್ ನೋಟ್:
ಆಗ ನೋಡಿದೆ ನಿನ್ನ ವಾಟ್ಸಪ್…
ಭಾರಿ ಖುಷಿ ಆಯ್ತು.
ಅಜ್ಜರದ್ದು ಒಂದು ಡಿಮ್ಯಾಂಡ್ ಉಂಟು ಮಾರಾಯಾ.
ಅವರಿಗೆ ಒಂದು ಕೋಟಿ ಕೊಡಬೇಕಂತೆ.
ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ ಕೊಡಬೇಕಂತೆ.
ಐವತ್ತು ಲಕ್ಷ ಅವರಿಗೆ (ಪೇಜಾವರ?) ಬೇಕಂತೆ.
ಆಮೇಲೆ ಈ ಮ್ಯಾಟರ್ ಫಿನೀಷ್ ಅಂತೆ.
ಆಮೇಲೆ ಏನೂಂತ ಅಂದ್ರೆ… ಕರ್ನಾಟಕದಲ್ಲಿ ಸೋದೆ ಮಠದ ಶಿಷ್ಯಂದಿರ ಒಟ್ಟು ಎಂಟು ಸಾವಿರ ಮನೆ ಉಂಟಂತೆ. ಎಂಟು ಸಾವಿರ ಮನೆಗೆ ಒಂದೊಂದು ಮನೆಯಿಂದ ಒಂದೊಂದು ಪವನ್ ಚಿನ್ನ ವ್ಯವಸ್ಥೆ ಮಾಡಿ ಕೊಡುತ್ತೇನೆ ಅಂತ ಹೇಳಿದ್ದಾನೆ. ವಿಶ್ವವಲ್ಲಭ (ಸೋದೆ ಮಠಾಧೀಶರು) ಹೇಳಿದ್ದಾನೆ. ಅದನ್ನು ಇವರು ಬೇಡುತ್ತಿದ್ದಾರೆ.
ವಿಷಯ ಇವತ್ತು ಬೆಳಗ್ಗೆ ಗೊತ್ತಾಯ್ತು. ಇಷ್ಟೇ ವಿಷಯ, ಎಲ್ಲರಿಗೂ ತಿಳಿಸು ಆಯ್ತಾ ಅಂತ ಹೇಳಿದ್ದಾರೆ.
VIDEO