Connect with us

LATEST NEWS

ದೈವ ಸನ್ನಿಧಿಯಲ್ಲಿ ತಲೆ ಭಾಗಿಸಿ ನಿಂತ ದೈವದ ಆರಾಧನೆ ಅಪಹಾಸ್ಯ ಮಾಡಿದವರು

ದೈವ ಸನ್ನಿಧಿಯಲ್ಲಿ ತಲೆ ಭಾಗಿಸಿ ನಿಂತ ದೈವದ ಆರಾಧನೆ ಅಪಹಾಸ್ಯ ಮಾಡಿದವರು

ಮಂಗಳೂರು ಉಡುಪಿ 21: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ದೈವದ ಆರಾಧನೆಯನ್ನು ಅಪಹಾಸ್ಯ ಮಾಡುವ ವಿಡಿಯೋದಲ್ಲಿದ್ದ ಯುವಕರು ದೈವದ ಸನ್ನಿಧಿಯಲ್ಲಿ ಕ್ಷಮಾಪಣೆ ಕೇಳಿದ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೋ ಒಂದು ತುಳುನಾಡಿನಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು. ಬೆಳ್ತಂಗಡಿಯ ಮದುವೆ ಕಾರ್ಯಕ್ರಮವೊಂದು ನಡೆದ ಸಭಾಂಗಣದಲ್ಲಿ ಮದುವೆಯ ಮರುದಿನ ಅಲಂಕಾರ ಸಾಮಾಗ್ರಿಗಳನ್ನು ತೆರವುಗೊಳಿಸುವ ವೇಳೆಯಲ್ಲಿ ಕೆಲಸದ ಯುವಕರಾದ ರಾಜೇಶ್ ಆಚಾರ್ಯ , ಶ್ರೀನಿವಾಸ್ ಆಚಾರ್ಯ ಸೇರಿದಂತೆ ನಾಲ್ಕು ಯುವಕರ ಗುಂಪು ಹೂವಿನ ರಾಶಿಯ ಮೇಲೆ ದೈವಾವೇಶ ಬಂದಂತೆ ನಟಿಸಿ ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಆ ವೀಡಿಯೋವನ್ನು ಹರಿಯಬಿಟ್ಟು ತುಳುವರು ಪ್ರತಿ ಕುಟುಂಬದಲ್ಲಿ ನಂಬುವ ,ಅರಾಧಿಸುವ ದೈವವನ್ನು ಅಣಕಿಸಿದ್ದರು.ಆ ಮೂಲಕ ತುಳುವರ ನಂಬಿಕೆಗೆ ಧಕ್ಕೆ ಘಾಸಿ ಉಂಟು ಮಾಡಿದ್ದರು.

ಈ ಘಟನೆ ತುಳುನಾಡಿನದ್ಯಾಂತ ಸುದ್ದಿ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ದುರ್ವರ್ತನೆಗೆ ಟೀಕೆ ಕೂಡ ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ಇವರು ಈ ಘಟನೆಯ ಕುರಿತು ದೂರು ದಾಖಲಿಸುವ ಎಚ್ಚರಿಕೆ ನೀಡಿದ್ದರ, ಅಲ್ಲದೆ ಆ ಯುವಕರ ವಿರುದ್ದ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಂಘವನ್ನು ಸಂಪರ್ಕಿಸಿದ ಯುವಕರು ಕ್ಷಮೆ ಕೇಳಿ ದೈವ ಸಾನಿಧ್ಯದಲ್ಲಿ ತಪ್ಪು ಕಾಣಿಕೆ ಹಾಕುವುದಾಗಿ ಅವಲತ್ತುಕೊಂಡಿದ್ದರು.

ಆದರೂ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ಇವರ ಮುತುವರ್ಜಿಯಲ್ಲಿ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಇಂತಹ ನಂಬಿಕೆ ಭಂಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ ನಲಿಕೆ ಸಮಾಜ ಸೇವಾ ಸಂಘದ ಅಧೀನದ ಸಂಭ್ರಮ ಸಭಾಭವನದ ಆವರಣದಲ್ಲಿರುವ ಗುಳಿಗನ ಸಾನಿಧ್ಯದಲ್ಲಿ ಸಮಾಜದ ಹಿರಿಯರ ಉಪಸ್ಥಿತಿಯಲ್ಲಿ ಗುಳಿಗ ಸನ್ನಿಧಿಯಲ್ಲಿ ಮಾಡಿದ ತಪ್ಪಿಗೆ ಯುವಕರು ಕ್ಷಮೆ ಕೇಳಿದ್ದಾರೆ. ದೈವ ನಂಬಿಕೆಗೆ ಅವಮಾನ ಮಾಡಿದ ತಪ್ಪಿಗೆ ದೈವ ಸನ್ನಿಧಿಯಲ್ಲಿ ತಪ್ಪುಕಾಣಿಕೆ ಸಮರ್ಪಿಸಿ ತುಳುನಾಡಿನ ಸಮಸ್ತ ದೈವ ಭಕ್ತರಲ್ಲಿ ಕ್ಷಮೆ ಕೇಳಿದರು.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *