LATEST NEWS
ಇನ್ನು 5 ತಿಂಗಳ ಕಾಲ ಶಿರಾಡಿ ಘಾಟ್ ಬಂದ್
ಇನ್ನು 5 ತಿಂಗಳ ಕಾಲ ಶಿರಾಡಿ ಘಾಟ್ ಬಂದ್
ಮಂಗಳೂರು ಅಗಸ್ಟ್ 20: ಶಿರಾಢಿ ಘಾಟ್ ರಸ್ತೆಯಲ್ಲಿ ನೂರಕ್ಕೂ ಅಧಿಕ ಕಡೆ ಭೂ ಕುಸಿತವಾಗಿದ್ದು, ಮುಂದಿನ ಕನಿಷ್ಠ ಐದು ತಿಂಗಳ ಕಾಲ ಶಿರಾಢಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ ಅನಿವಾರ್ಯವಾಗಿದೆ.ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಸಂಚಾರಕ್ಕೆ ಮುಕ್ತವಾಗಿದ್ದ ಶಿರಾಢಿ ಘಾಟ್ ಈಗ ಮತ್ತೆ ಬಂದ್ ಆಗಲಿದೆ.
ಕರಾವಳಿಯಲ್ಲಿ ಸುರಿದ ಮಹಾಮಳೆ ಹಾಗೂ ಶಿರಾಢಿ ಘಾಟ್ ಪ್ರದೇಶದಲ್ಲಿ ಸುರಿದ ಮಳೆಗೆ ಶಿರಾಢಿ ಘಾಟ್ ನ ನೂರಕ್ಕೂ ಅಧಿಕ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗಷ್ಟೇ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದಕ್ಕಾಗಿ ವ್ಯಯಿಸಿದ್ದ 150 ಕೋಟಿ ರೂಪಾಯಿ ನೀರಲ್ಲಿ ಹೋಮ ಮಾಡಿದಂತಾಗಿದೆ.
You must be logged in to post a comment Login