ಸಖತ್ ವೈರಲ್ ಆದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಬುರ್ಖಾ ಪೋಟೋ

ಪುತ್ತೂರು ನವೆಂಬರ್ 29: ಕಾಂಗ್ರೇಸ್ ನಾಯಕಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಬುರ್ಖಾ ಹಾಕಿದ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲಾರಂಭಿಸಿದೆ.

ಈ ಫೋಟೋ ದಲ್ಲಿ ಶಕುಂತಲಾ ಶೆಟ್ಟಿ ಸೇರಿದಂತೆ ಪುತ್ತೂರಿನ ಇತರ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳೂ ಇದ್ದು, ದುಬೈನಲ್ಲಿ ನಡೆದ ತುಳು ಸಮ್ಮೇಳನಕ್ಕೆ ತೆರಳಿದ ಸಂದರ್ಭದ ಫೋಟೋ ಇದಾಗಿದೆ.

ಗಲ್ಫ್ ರಾಷ್ಟ್ರಗಳ ಕೆಲವು ಪ್ರದೇಶಗಳಲ್ಲಿ ಬುರ್ಖಾ ಹಾಕುವುದು ಕಡ್ಡಾಯವಾಗಿದ್ದು, ಶಕುಂತಲಾ ಶೆಟ್ಟಿ‌ ಕೂಡಾ ಅಲ್ಲಿನ ಕಾನೂನು ಪ್ರಕಾರ ಬುರ್ಖಾ ತೊಟ್ಟಿದ್ದಾರೆ ಎನ್ನುವ ಸ್ಪಷ್ಟನೆಯನ್ನು ಈಗಾಗಲೇ ಪುತ್ತೂರಿನ ಕಾಂಗ್ರೆಸ್ ಮುಖಂಡರು ನೀಡಿದ್ದಾರೆ. ಆದರೆ ಇದೇ ಫೋಟೋ ವನ್ನು ಇದೀಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಮೂಲಕ ಶಕುಂತಲಾ ಶೆಟ್ಟಿ ಬುರ್ಖಾ ದಲ್ಲಿ ಎನ್ನುವ ಶೀರ್ಷಿಕೆಯನ್ನೂ

4 Shares

Facebook Comments

comments