ಚಲಿಸುತ್ತಿದ್ದ ಕಾರಿಗೆ ಬೆಂಕಿಗಾಹುತಿ : ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಪುತ್ತೂರು, ನವೆಂಬರ್ 29 : ಚಲಿಸುತ್ತಿದ್ದ ಓಮ್ನಿ ಕಾರು ಬೆಂಕಿಗಾಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದ ಕುಟ್ರುಪ್ಪಾಡಿ ಗ್ರಾಮದ ತಲೇಕಿ ಎಂಬಲ್ಲಿ  ಸಂಭವಿಸಿದೆ. ಸ್ಥಳೀಯ ಬೈದ್ರಿಜಾಲು ನಿವಾಸಿ ಸುಂದರ ಗೌಡ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಸುಂದರ ಗೌಡರು ಮನೆಯವರೊಂದಿಗೆ ಮಾರುತಿ ಓಮ್ನಿ ಕಾರಲ್ಲಿ ಕಡಬಕ್ಕೆ ಹೋಗುತ್ತಿದ್ದ ಸಂದರ್ಭ ತಲೇಕಿ ಬಳಿ ಏಕಾಏಕಿ  ಕಾರಿನ ಎಂಜಿನ್ ಬಳಿ ಹೊಗೆ ಕಾಣಿಸಿಕೊಂಡಿದೆ.

ತಕ್ಷಣವೇ ಕಾರು ನಿಲ್ಲಿಸಿ ಪರಿಶೀಲನೆ ನಡೆಸಿದ ಚಾಲಕ ಇಂಜಿನ್ ಬಳಿ ಬೆಂಕಿ ಹತ್ತಿರುವುದನ್ನು ಖಾತರಿ ಪಡಿಕೊಂಡಿದ್ದಾನೆ.

ಕೂಡಲೇ ಕಾರಿನಲ್ಲಿದ್ದವರು ಹೊರಗಡೆ ಇಳಿದಿದ್ದರಿಂದ ಜೀವಪಾಯದಿಂದ ಪಾರಾಗಿದ್ದಾರೆ.

ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ವ್ಯಾಪಿಸಿ ಸುಟ್ಟು ಹೋಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋಗಾಗಿ..

4 Shares

Facebook Comments

comments