ಉಡುಪಿಯಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಉಲ್ಲಂಘನೆ – ಹೆಚ್ಚುತ್ತಿರುವ ಮಹಿಳಾ ಭಿಕ್ಷುಕರ ಕಾಟ

ಉಡುಪಿ ನವೆಂಬರ್ 29: ಉಡುಪಿ ನಗರದಲ್ಲಿ ಈಗ ಮಹಿಳಾ ಭಿಕ್ಷುಕರ ಕಾಟ ವೀಪರಿತವಾಗುತ್ತಿದ್ದು, ಸಾರ್ವಜನಿಕರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿದೆ.

ಉಡುಪಿ ನಗರದಲ್ಲಿ ಈಗ ಹೊರ ರಾಜ್ಯಗಳಿಂದ ವಲಸೆ ಬಂದಿರುವ ಮಹಿಳಾ ಭಿಕ್ಷುಕರ ಕಾಟ ಹೆಚ್ಚಳವಾಗಿದೆ. ಹೊರ ರಾಜ್ಯಗಳಿಂದ ಬಂದು ಜಿಲ್ಲೆಯಲ್ಲಿ ನೆಲೆಸಿರುವ ಇವರು ದಿನಗೂಲಿ ಕೆಲಸ ಬಿಟ್ಟು ಸುಲಭವಾಗಿ ಹಣ ಮಾಡಲು ಭಿಕ್ಷಾಟನೆಗೆ ಇಳಿದಿದ್ದಾರೆ.

ಉಡುಪಿ ಜಿಲ್ಲೆ ದೇವಸ್ಥಾನಗಳ ಭೇಟಿಗೆ ಪ್ರವಾಸಿಗರು ಅತಿ ಹೆಚ್ಚು ಆಗಮಿಸುವ ಹಿನ್ನಲೆಯಲ್ಲಿ ಇಲ್ಲಿ ವಲಸೆ ಮಹಿಳೆಯರು ಭಿಕ್ಷಾಟನೆಗೆ ಇಳಿದಿದ್ದಾರೆ. ಈ ಭಿಕ್ಷಾಟನೆ ನಿರತ ಮಹಿಳೆಯರು ಪಾದಚಾರಿಗಳನ್ನು ಹಿಂಬಾಲಿಸಿ ಕೊಂಡು ಹೋಗಿ ಬಲವಂತವಾಗಿ ಭೀಕ್ಷೆ ಬೇಡುತ್ತಿದ್ದಾರೆ.

ಕುಡಿತದ ಅಮಲಿನಲ್ಲಿ ಇರುವ ಇವರು ಬೇಡಿಕೆ ಇಟ್ಟಷ್ಟು ನೀಡದೆ ಹೋದಲ್ಲಿ ಅವ್ಯಾಚ ಶಬ್ಧಗಳಿಂದ ನಿಂದಿಸುತ್ತಾರೆ. 5,10 ರೂ ನೀಡಿದರೆ ನಿರಾಕರಿಸುತ್ತಾರೆ. ಇವರ ಉಪಟಳದಿಂದ ಸಾರ್ವಜನಿಕರು ಬೆಸತ್ತು ಹೋಗಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ಬಸ್ಸು ಪ್ರಯಾಣಕ್ಕೆ ಇಟ್ಟುಕೊಂಡ ಟಿಕೇಟು ಹಣವನ್ನು ಭೀಕ್ಷುಕರಿಗೆ ನೀಡಿ, ಪರಿಚಿತರಲ್ಲಿ ಸಾಲ ಮಾಡಿ ವಿದ್ಯಾರ್ಥಿಗಳು ಮನೆಗೆ ಸೇರಿದ ಘಟನೆಗಳು ನಡೆದಿವೆ.

ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ನಗರದಲ್ಲೆ ಭಿಕ್ಷಾಟನೆ ನಿರತರನ್ನು ವಶಕ್ಕೆ ಪಡೆದು ಭಿಕ್ಷುಕರ ಪುರ್ನವಸತಿ ಕೇಂದ್ರಗಳಿಗೆ ದಾಖಲು ಪಡಿಸುವ ಕಾನೂನು ಸುವ್ಯವಸ್ಥೆಗಳು ಸಂಬಂಧಪಟ್ಟ ಇಲಾಖೆಗಳಿಂದ ನಡೆಯುತ್ತಿಲ್ಲ.

ನಗರದಲ್ಲಿ ಹೆಚ್ಚಳ ಕಂಡಿರುವ ಭಿಕ್ಷಾಟನೆ ಪಿಡುಗನ್ನು ಮುಕ್ತಗೊಳಿಸ ಬೇಕು ತಕ್ಷಣ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗಳು ಶಿಸ್ತು ಕ್ರಮಕೈಗೊಳ್ಳ ಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹ ಪಡಿಸಿದ್ದಾರೆ.

Facebook Comments

comments