Connect with us

FILM

ಕೊರೊನಾ ವಾರಿಯರ್ಸ್ ಆಗಿದ್ದ ಯುವ ನಟಿಗೆ ಪಾರ್ಶ್ವವಾಯು!

ಮುಂಬೈ : ಕೊರೊನಾ ಪ್ರಾರಂಭಿಕ ಹಂತದಲ್ಲಿ ಕೊರೊನಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ದುಡಿದಿದ್ದ ಬಾಲಿವುಡ್ ನಟಿ ಶಿಖಾ ಮಲ್ಹೋತ್ರಾ ಅವರಿಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.


ನಟಿ ಶಿಖಾ ಮಲ್ಹೋತ್ರಾ ಬಾಲಿವುಡ್ ನಟ ಶಾರುಕ್ ಖಾನ್ ನಟಿಸಿದ್ದ ‘ಫ್ಯಾನ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಲ್ಲದೆ ಕೊರೊನಾ ಲಾಕ್ ಡೌನ್ ಸಂದರ್ಭ ನರ್ಸ್ ಆಗಿ ಮುಂಬೈನ ಕೊರೊನಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರು. ನಂತರ ಅಕ್ಟೋಬರ್ ನಲ್ಲಿ ಶಿಖಾ ಅವರಿಗೆ ಕೊರೊನಾ ಸೊಂಕು ತಗುಲಿದ್ದು, ಅದರಿಂದ ಚೇತರಿಸಿಕೊಂಡಿದ್ದರು. ಆದರೆ ಡಿಸೆಂಬರ್ 10 ರಂದು ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.


ಈ ಕುರಿತಂತೆ ನಟಿಯ PRO ಅಶ್ವಾನಿ ಶುಕ್ಲಾ ಮಾಹಿತಿ ನೀಡಿದ್ದು ನಟಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಶಿಖಾ ಕೊರೋನಾದಿಂದ ಚೇತರಿಸಿಕೊಂಡ ಬಳಿಕ, ಅವರ ರಕ್ತದಲ್ಲಿ ಸಕ್ಕರೆ ಮಟ್ಟವು ಕಡಿಮೆಯಾಗಿದ್ದು, ಆರೋಗ್ಯ ಸಮಸ್ಯೆಗೆ ಕಾರಣ ಎಂದು ಅಶ್ವಾನಿ ಹೇಳಿದ್ದಾರೆ.

Facebook Comments

comments