LATEST NEWS
ಕಲಿಯುಗವರದ ಅಯ್ಯಪ್ಪನ ಸನ್ನಿಧಿ ಸದಾ ಭಕ್ತರಿಂದ ತುಂಬಿರುತ್ತೆ ಆದ್ರೆ ಶಬರಿಮಲೆ ಸನ್ನಿಧಿ ಈಗ ಭಕ್ತರಿಲ್ಲದೆ ಖಾಲಿಖಾಲಿ
ಕೇರಳ : ದೇಶದಲ್ಲಿ ಅತೀ ಹೆಚ್ಚು ಆದಾಯ ತರುವ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕೇರಳದ ಶಬರಿಮಲೆ ಕೊರೊನಾ ಕಾರಣದಿಂದ ಆದಾಯದಲ್ಲಿ ಭಾರೀ ಕಡಿಮೆ ಆಗಿದೆ.
ಸತತ ಎರಡು ವರ್ಷಗಳಲ್ಲಿ ಭಕ್ತರಿಲ್ಲದೆ ಶಬರಿಮಲೆ ಬಿಕೋ ಎನುತ್ತಿದೆ. ಕೇರಳ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿರುವ ಕಾರಣ ಈ ಬಾರಿಯ ಮಕರ ಸಂಕ್ರಮಣ ಪಡಿ ಪೂಜೆ ವಿಷು ಹಾಗೂ ವಾರ್ಷಿಕ ಉತ್ಸವಗಳಿಗೂ ತೊಂದರೆ ಉಂಟಾಗಿತ್ತು. 2020 ರಲ್ಲಿ ಸುಮಾರು 8 ಕೋಟಿ ವಾರ್ಷಿಕ ಆದಾಯ ಕಡಿತವಾಗಿತ್ತು.
ಪ್ರಸಕ್ತ ವರ್ಷದಲ್ಲಿ ದೇವಳದ ಬಾಗಿಲೇ ತೆರೆಯದ ಕಾರಣ ಈ ವರ್ಷ ಹೆಚ್ಚು ಹೊಡೆತ ಬೀಳಲಿದೆ. ಪ್ರತೀ ತಿಂಗಳು ಸಂಕ್ರಾಂತಿಯಿಂದ ಐದು ದಿನ ತೆರಯುತ್ತಿದ್ದ ಕಾರಣ ದೇಶದ ವಿವಿಧ ಭಾಗಗಳ ಭಕ್ತಾದಿಗಳಿಗೆ ಅನುಕೂಲವಾಗುತ್ತಿತ್ತು. ಆದ್ರೆ ಕಳೆದ ಎರಡು ವರ್ಷಗಳಿಂದ ಬಹುತೇಕ ಭಕ್ತರಿಗೆ ಅಯ್ಯಪ್ಪ ದರ್ಶನವಾಗಿಲ್ಲ. ಮೂರನೇ ಅಲೆ ಆತಂಕ ಈಗಾಗಲೇ ಮನೆ ಮಾಡಿದ್ದು ಈ ವರ್ಷವೂ ಶಬರಿಮಲೆ ಯಾತ್ರೆಗೆ ಹೊಡೆತಬೀಳಲಿದೆ