LATEST NEWS
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಥೈಲ್ಯಾಂಡ್ ಮಹಾರಾಜನ ಪತ್ನಿಯ ನಗ್ನ ಚಿತ್ರಗಳು

#photos Credit : Daily mail online
ಬ್ಯಾಂಕಾಕ್: ಥೈಲ್ಯಾಂಡ್ ಮಹಾರಾಜನ ಪತ್ನಿಯ ಸುಮಾರು 1400 ನಗ್ನ ಪೋಟೋಗಳು ರಾಜಕೀಯ ವೈರಿಗಳ ಕೈಗೆ ಸಿಕ್ಕಿದೆ ಎಂದು ಹೇಳಲಾಗಿದ್ದು, ಅದರಲ್ಲಿನ ಕೆಲವು ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನ್ ಲೈನ್ ಪೋರ್ಟಲ್ ಡೈಲಿ ಮೇಲ್ ಆನ್ಲೈನ್ ನ್ಯೂಸ್ ವೆಬ್ಸೈಟ್ ಇದರಲ್ಲಿನ ಕೆಲವು ಚಿತ್ರಗಳನ್ನು ಪ್ರಕಟಿಸಿದೆ.

ಥೈಲ್ಯಾಂಡ್ ಮಹಾರಾಜ ವಾಜಿರಲಾಂಗ್‌ಕಾರ್ನ್‌ನ ಪತ್ನಿಯಾಗಿರುವ ಸಿನೀನಾತ್ ವೊಂಗ್ವಾಜಿರಾಪಕ್ಡಿಯ ಒಟ್ಟು 1400 ಫೋಟೋಗಳು ಸೋರಿಕೆಯಾಗಿರುವ ವಿಚಾರ ಈ ವಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು.
ಈಗಾಗಲೇ ಜೈಲು ವಾಸ ಅನುಭವಿಸಿ ಮರಳಿ ರಾಜನ ಆಶ್ರಯ ಸೇರಿರುವ ಸಿನೀನಾತ್ನ ನಗ್ನ ಚಿತ್ರಗಳು ರಾಜಪ್ರಭುತ್ವ ವಿರೋಧಿ ಜನರ ಕೈಗೆ ಸೇರಿದೆ. ಸುಮಾರು 1,400 ಚಿತ್ರಗಳು ಸಿಕ್ಕಿವೆ ಎನ್ನಲಾಗಿದ್ದು, ಇದರಲ್ಲಿ ನೂರಾರು ಚಿತ್ರಗಳು ನಗ್ನ ಚಿತ್ರಗಳಾಗಿವೆ. ಈ ಫೋಟೋಗಳನ್ನು ಸಿನೀನಾತ್, ರಾಜ ವಾಜಿರಲಾಂಗ್‌ಕಾರ್ನ್ ಗೆ ಕಳುಹಿಸಿಲು ತೆಗೆದುಕೊಂಡಿದ್ದು ಎನ್ನಲಾಗಿದೆ. 2012ರಿಂದ 2014ರ ವೇಳೆಯಲ್ಲಿ ತೆಗೆಯಲಾಗಿರುವ ಈ ಚಿತ್ರಗಳು ಇದೀಗ ಸಾರ್ವಜನಿಕವಾಗಿ ಹರಿದಾಡಲಾರಂಭಿಸಿವೆ.
ನೀತಾತ್ ರಾಜನ ಆಶ್ರಯಕ್ಕೆ ಮರಳದಿರುವಂತೆ ತಡೆಯುವ ಕುತಂತ್ರ ಇದರ ಹಿಂದಿತ್ತು ಎನ್ನಲಾಗಿದೆ. ರಾಜನ ಪತ್ನಿ ಹಾಗೂ ರಾಣಿ ಸುಥಿದಾ ಕೈವಾಡ ಇದರಲ್ಲಿ ಕೇಳಿಬಂದಿದೆ.
ವೈರಲ್ ಆಗಿರುವ ಕೆಲವೊಂದು ಚಿತ್ರಗಳಲ್ಲಿ ಸಿನೀತಾತ್ ಸಂಪೂರ್ಣ ನಗ್ನವಾಗಿದ್ದರೆ, ಅನೇಕ ಫೋಟೋಗಳಲ್ಲಿ ತುಂಡುಡುಗೆ ತೊಟ್ಟು, ಶೇವ್ ಮಾಡಿರದ ಕಂಕುಳನ್ನು ಪ್ರದರ್ಶಿಸಿರುವ ಫೋಟೋಗಳಿವೆ. ಎಲ್ಲ ಫೋಟೋಗಳು ಸಹ ಸೆಲ್ಫಿ ಮಾದರಿಯಾಗಿದ್ದು, ಕೆಲವೊಂದು ಬಾತ್ರೂಮ್ ಅಥವಾ ಆಕೆಯ ಕಾರಿನಲ್ಲಿ ತೆಗೆದುಕೊಳ್ಳಲಾಗಿದೆ.