Connect with us

    FILM

    ಪಾಪಪಾಂಡು ಖ್ಯಾತಿಯ ಶಂಕರ್​ ರಾವ್​ ನಿಧನ

    ಬೆಂಗಳೂರು ಅಕ್ಟೋಬರ್ 18: ಕನ್ನಡ ಚಿತ್ರರಂಗದ ಹಿರಿಯ ನಟ ‘ಪಾಪ ಪಾಂಡು’ ಧಾರಾವಾಹಿಯ ಖ್ಯಾತಿಯ ಶಂಕರ್​ ರಾವ್​ ನಿಧನರಾಗಿದ್ದಾರೆ.


    ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಇಂದು ಬೆಳಗಿನ ಜಾವ 6:30ರ ಸುಮಾರಿಗೆ ತಮ್ಮ ಅರಕೆರೆಯ ನಿವಾಸದಲ್ಲಿ ನಿಧನರಾಗಿದ್ದು, ಇವರು ಪಾಪ ಪಾಂಡು ಧಾರಾವಾಹಿಯ ಪಾತ್ರದಿಂದ ಜನಮನ್ನಣೆಗಳಿಸಿದ್ದರು. ಕನ್ನಡದ ಹಲವಾರು ಜನಪ್ರಿಯ ನಟರೊಂದಿಗೆ ನಟಿಸಿ ಕನ್ನಡದ ಸಿನಿ ಪ್ರೇಕ್ಷಕರನ್ನು ತಮ್ಮ ಹಾಸ್ಯದ ಮೂಲಕ ರಂಜಿಸಿದ ಕಲಾವಿದ ಇಂದು ಇಹಲೋಕ ತ್ಯಜಿಸಿದ್ದಾರೆ. ಕಲಾವಿದನ ಆಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ತುಮಕೂರು ಮೂಲದ ಶಂಕರ್ ರಾವ್ ಅವರು ವೈವಿದ್ಯಮಯ ಪಾತ್ರಗಳನ್ನು ನಿರ್ವಹಿಸಿದ ಅಪಾರ ಅನುಭವ ಉಳ್ಳವರು. ಅದರಲ್ಲೂ ಹಾಸ್ಯ ಪಾತ್ರಗಳಲ್ಲಿ ಮಿಂಚಿ ಕನ್ನಡಿಗರನ್ನು ರಂಜಿಸಿದವರು.

    Share Information
    Advertisement
    Click to comment

    You must be logged in to post a comment Login

    Leave a Reply