FILM
ಕನ್ನಡದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ ವಿಧಿವಶ

ಬೆಂಗಳೂರು ಎಪ್ರಿಲ್ 14: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳ ಕಾಲ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ.
ಜನಾರ್ಧನ್ ಅವರು 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕಾಶಿನಾಥ್ ಜೊತೆಗಿನ ಅಜಗಜಾಂತರ ಸಿನಿಮಾ ಜನಾರ್ಧನ್ ಅವರ ಸಿನಿಮಾ ಪಯಣಕ್ಕೆ ತಿರುವು ನೀಡಿದ ಚಿತ್ರ. ತರ್ಲೆನನ್ಮಗ ಸಿನಿಮಾ ಬಳಿಕ ನಟ ಜಗ್ಗೇಶ್ ಹಾಗೂ ಜನಾರ್ಧನ್ ಕಾಂಬಿನೇಷನ್‌ನಲ್ಲಿ ಹಲವು ಸಿನಿಮಾಗಳು ತೆರೆಕಂಡವು. ಉಪೇಂದ್ರ ನಿರ್ದೇಶನದ ಶ್ ಸಿನಿಮಾದಲ್ಲಿ ಜನಾರ್ಧನ್ ಅವರು ನಿರ್ವಹಿಸಿದ ಸಬ್ ಇನ್ ಸ್ಪೆಕ್ಟರ್ ಪಾತ್ರ ಹಿಟ್ ಆಗಿತ್ತು. ತೆಲುಗು, ತಮಿಳು ಹಾಗೂ ತುಳು ಚಿತ್ರಗಳಲ್ಲೂ ನಟಿಸಿದ್ದಾರೆ. ಬ್ಯಾಂಕ್ ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಅವರು, ರಂಗಭೂಮಿಯ ನಂಟೂ ಹೊಂದಿದ್ದರು.

1 Comment