LATEST NEWS
ಉಳ್ಳಾಲ – ಸಮುದ್ರಪಾಲಾಗುತ್ತಿದ್ದ ಮಹಿಳೆಯರ ರಕ್ಷಣೆ ಮಾಡಿದ ಶಿವಾಜಿ ಜೀವ ರಕ್ಷಕ ಸಂಘ ಮೊಗವೀರ ಪಟ್ನಾ ಸದಸ್ಯರಿಗೆ ಉಳ್ಳಾಲ ಪೋಲಿಸರಿಂದ ಸನ್ಮಾನ

ಮಂಗಳೂರು ಎಪ್ರಿಲ್ 14: ಉಳ್ಳಾಲ ಸಮುದ್ರ ತೀರದಲ್ಲಿ ಕುಳಿತಿದ್ದ ವೇಳೆ ದೊಡ್ಡ ಅಲೆಗೆ ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಿದ್ದ ಶಿವಾಜಿ ಜೀವ ರಕ್ಷಕ ಸಂಘ ಮೊಗವೀರ ಪಟ್ನಾ ಇದರ ಸದಸ್ಯರಿಗೆ ಉಳ್ಳಾಲ ಪೊಲೀಸರು ಸನ್ಮಾನ ಮಾಡಿದ್ದಾರೆ.
ಬೆಂಗಳೂರಿನಿಂದ ಬಂದ 4 ಜನ ಪ್ರವಾಸಿ ಮಹಿಳೆಯರು ಈ ದಿನ ಕುತ್ತಾರು ಕೊರಗಜ್ಜನ ಕಟ್ಟೆಯ ದರ್ಶನ ಮುಗಿಸಿ ಮಧ್ಯಾಹ್ನ 01.30 ರ ವೇಳೆಗೆ ಉಳ್ಳಾಲ ಸಮುದ್ರ ಕಿನಾರೆ ಬಳಿ ಬೀಚ್ ವಿಹಾರಕ್ಕೆಂದು ಹೊರಟು ಆಟವಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಸಮುದ್ರ ಪಾಲಾಗುತ್ತಿರುವವರನ್ನು ಶಿವಾಜಿ ಜೀವ ರಕ್ಷಕ ಸಂಘ ಮೊಗವೀರ ಪಟ್ನಾ ಇದರ ಸದಸ್ಯರು ಸಮಯ ಪ್ರಜ್ಞೆ ಮೆರೆದು ಎಲ್ಲರನ್ನು ದಡ ತಲುಪಿಸಿ ಪ್ರಾಣಾಪಾಯದಿಂದ ಪಾರು ಮಾಡಿರುತ್ತಾರೆ.

ಇವರ ಈ ಜೀವ ರಕ್ಷಣಾ ಕಾರ್ಯವನ್ನು ಮೆಚ್ಚಿ ಉಳ್ಳಾಲ ಪೋಲಿಸ್ ಠಾಣೆಯ ನಿರೀಕ್ಷಕರು ಶ್ರೀ ವಿರೂಪಾಕ್ಷ ಸ್ವಾಮಿ ರವರು ಗೌರವಪೂರ್ವಕವಾಗಿ ಸನ್ಮಾನಿಸಿ ಶ್ಲಾಘಿಸಿರುತ್ತಾರೆ .ಪ್ರಾಣ ಉಳಿಸಿದ ಶೌರ್ಯ ಸಾಹಸಿಗಳಿಗೆ ಉಳ್ಳಾಲ ಪೋಲಿಸ್ ಠಾಣೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
1 Comment