Connect with us

    KARNATAKA

    ಮರ್ಮಾಂಗದ ಫೋಟೋ ಕಳಿಸದಿದ್ರೆ ಕೈ ಕೊಯ್ದುಕೊಳ್ತೀನಿ: ಕಾಮುಕನಿಗೆ ಹೆದರಿ ಎಡವಟ್ಟು!

    ಬೆಂಗಳೂರು, ಫೆಬ್ರವರಿ 09:  ಆನ್​ಲೈನ್​ ಕ್ಲಾಸ್​ ಶುರುವಾದಗಿನಿಂದ ಒಂದಲ್ಲ ಒಂದು ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಥದ್ದೇ ಮತ್ತೊಂದು ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ನಿಮ್ಮ ಮನೆಯ ಅಪ್ರಾಪ್ತ ಹೆಣ್ಣು ಮಕ್ಕಳು ಇನ್​ಸ್ಟಾಗ್ರಾಂ ಬಳಸುತ್ತಿದ್ದರೇ ಸ್ವಲ್ಪ ಜಾಗೃತರಾಗುವುದು ಒಳಿತು.

    ಮರ್ಮಾಂಗದ ಫೋಟೋ ಕಳುಹಿಸಲೇಬೇಕು. ಇಲ್ಲದಿದ್ದರೇ ನಾನು ಕೈ ಕೊಯ್ದುಕೊಳ್ತಿನೆಂಬ ಕಾಮುಕನೊಬ್ಬನ ಬೆದರಿಕೆಗೆ ಹೆದರಿದ ಹುಡುಗಿ ಫೋಟೋ ಶೇರ್​ ಮಾಡಿರುವ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಹುಡುಗಿಗೆ ಇನ್​ಸ್ಟಾಗ್ರಾಂನಲ್ಲಿ ಕಾರ್ತಿಕ್ ಎಂಬಾತ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದ.

    ಬಳಿಕ ಫ್ರೆಂಡ್​ಶಿಪ್​ ಹೆಸರಿನಲ್ಲಿ ಕಾಮುಕ ಕಾರ್ತಿಕ್, ಹುಡುಗಿಗೆ ಫೋರ್ನ್​ ಫೋಟೋ ಮತ್ತು ವಿಡಿಯೋಗಳನ್ನು ಅಪ್ರಾಪ್ತೆಗೆ ಕಳುಹಿಸುತ್ತಿದ್ದ. ಬಳಿಕ ಆಕೆಯ ಮರ್ಮಾಂಗದ ಫೋಟೋ ಕಳುಹಿಸುವಂತೆ ಕೇಳಿದ್ದ. ಒಂದು ವೇಳೆ ಫೋಟೋ ಕಳುಹಿಸದಿದ್ದರೇ ಕೈ ಕುಯ್ದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.

    ಇದೇ ಭಯದಲ್ಲಿ ಅಪ್ರಾಪ್ತೆ ಕಾರ್ತಿಕ್​ಗೆ ಮರ್ಮಾಂಗದ ಫೋಟೋ ಶೇರ್ ಮಾಡಿದ್ದಾಳೆ. ಇದಾದ ಬಳಿಕ ಆಕೆ ವರ್ತನೆಯ ಪಾಲಕರಿಗೆ ಅನುಮಾನ ಬಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ, ಪಶ್ಚಿಮ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *