KARNATAKA
ಮರ್ಮಾಂಗದ ಫೋಟೋ ಕಳಿಸದಿದ್ರೆ ಕೈ ಕೊಯ್ದುಕೊಳ್ತೀನಿ: ಕಾಮುಕನಿಗೆ ಹೆದರಿ ಎಡವಟ್ಟು!
ಬೆಂಗಳೂರು, ಫೆಬ್ರವರಿ 09: ಆನ್ಲೈನ್ ಕ್ಲಾಸ್ ಶುರುವಾದಗಿನಿಂದ ಒಂದಲ್ಲ ಒಂದು ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಥದ್ದೇ ಮತ್ತೊಂದು ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ನಿಮ್ಮ ಮನೆಯ ಅಪ್ರಾಪ್ತ ಹೆಣ್ಣು ಮಕ್ಕಳು ಇನ್ಸ್ಟಾಗ್ರಾಂ ಬಳಸುತ್ತಿದ್ದರೇ ಸ್ವಲ್ಪ ಜಾಗೃತರಾಗುವುದು ಒಳಿತು.
ಮರ್ಮಾಂಗದ ಫೋಟೋ ಕಳುಹಿಸಲೇಬೇಕು. ಇಲ್ಲದಿದ್ದರೇ ನಾನು ಕೈ ಕೊಯ್ದುಕೊಳ್ತಿನೆಂಬ ಕಾಮುಕನೊಬ್ಬನ ಬೆದರಿಕೆಗೆ ಹೆದರಿದ ಹುಡುಗಿ ಫೋಟೋ ಶೇರ್ ಮಾಡಿರುವ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಹುಡುಗಿಗೆ ಇನ್ಸ್ಟಾಗ್ರಾಂನಲ್ಲಿ ಕಾರ್ತಿಕ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ.
ಬಳಿಕ ಫ್ರೆಂಡ್ಶಿಪ್ ಹೆಸರಿನಲ್ಲಿ ಕಾಮುಕ ಕಾರ್ತಿಕ್, ಹುಡುಗಿಗೆ ಫೋರ್ನ್ ಫೋಟೋ ಮತ್ತು ವಿಡಿಯೋಗಳನ್ನು ಅಪ್ರಾಪ್ತೆಗೆ ಕಳುಹಿಸುತ್ತಿದ್ದ. ಬಳಿಕ ಆಕೆಯ ಮರ್ಮಾಂಗದ ಫೋಟೋ ಕಳುಹಿಸುವಂತೆ ಕೇಳಿದ್ದ. ಒಂದು ವೇಳೆ ಫೋಟೋ ಕಳುಹಿಸದಿದ್ದರೇ ಕೈ ಕುಯ್ದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.
ಇದೇ ಭಯದಲ್ಲಿ ಅಪ್ರಾಪ್ತೆ ಕಾರ್ತಿಕ್ಗೆ ಮರ್ಮಾಂಗದ ಫೋಟೋ ಶೇರ್ ಮಾಡಿದ್ದಾಳೆ. ಇದಾದ ಬಳಿಕ ಆಕೆ ವರ್ತನೆಯ ಪಾಲಕರಿಗೆ ಅನುಮಾನ ಬಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ, ಪಶ್ಚಿಮ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Facebook Comments
You may like
ಮದುವೆ ಮಂಟಪವಾಗಿ ಬದಲಾದ ಜೈಲು…!
ಐಶಾರಾಮಿ ಕಾರು ಮಾರಾಟ ಪ್ರಕರಣ – ಎಸ್ಐ ಕಬ್ಬಾಳರಾಜ್, ಇನ್ ಸ್ಪೆಕ್ಟರ್ ರಾಮಕೃಷ್ಣ ಸಸ್ಪೆಂಡ್
ಹಾಡುಹಗಲೇ ದರೋಡೆಗೆ ಬಂದವರು ಅಗ್ನಿಶಾಮಕ ದಳದ ಸೈರನ್ ಕೇಳಿ ಎಸ್ಕೇಪ್…!!
ಸಿಸಿಬಿ ಪೊಲೀಸರ ವಿರುದ್ದ ಸಿಐಡಿ ತನಿಖೆ ಆರಂಭ.. ಆರೋಪಿಗಳು ಇನ್ನೂ ಕರ್ತವ್ಯದಲ್ಲಿ…!!
ಡಿಎಸ್ಪಿಯಾಗಿ ಚಿನ್ನದ ಓಟಗಾರ್ತಿ ‘ಹಿಮದಾಸ್’ ಅಧಿಕಾರ ಸ್ವೀಕಾರ
ಚೆನ್ನೈ-ಮಂಗಳೂರು ಎಕ್ಸ್ಪ್ರೆಸ್ನಲ್ಲಿ ಜಿಲೆಟಿನ್ ಕಡ್ಡಿ ಸಾಗಾಟ: ಮಹಿಳೆ ಬಂಧನ
You must be logged in to post a comment Login