LATEST NEWS
ಸಿದ್ದರಾಮಯ್ಯರ ನಡವಳಿಕೆ ನೋಡಿದ್ರೆ,ಅಯ್ಯೋಪಾಪ ಅನಿಸುತ್ತೆ - ಡಿವಿಎಸ್ ವ್ಯಂಗ್ಯ

ಸಿದ್ದರಾಮಯ್ಯರ ನಡವಳಿಕೆ ನೋಡಿದ್ರೆ,ಅಯ್ಯೋಪಾಪ ಅನಿಸುತ್ತೆ - ಡಿವಿಎಸ್ ವ್ಯಂಗ್ಯ
ಮಂಗಳೂರು, ನವೆಂಬರ್ 22 : ಮಾಜಿ ಸಿಎಂ ಸಿದ್ದರಾಮಯ್ಯ – ಸದಾನಂದ ಗೌಡ ಟ್ವಿಟರ್ ವಾರ್ ವಿಚಾರ ಸಂಬಂಧಿಸಿದಂತೆ ಕೆಂದ್ರ ಸಚಿವ ಡಿ ವಿ ಸದಾನಂ ಗೌಡ ಪ್ರತಿಕ್ರೀಯಿಸಿದ್ದಾರೆ. ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ಸದಾನಂದ ಗೌಡ ಅವರು ಸಿದ್ದರಾಮಯ್ಯರ ನಡವಳಿಕೆ ನೋಡಿದ್ರೆ,ಅಯ್ಯೋಪಾಪ ಅನಿಸುತ್ತೆ.
ರಾಜಕೀಯದಲ್ಲಿ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುತ್ತಿರಬೇಕು. ಸೋಶಿಯಲ್ ಮೀಡಿಯಾದಲ್ಲಿ ಈಗ ಪ್ರತಿಕ್ರಿಯೆ ನೀಡುವುದು ಬಹಳ ಸುಲಭ.

ಸಿದ್ದರಾಮಯ್ಯ ತಮ್ಮ ಮಾತು ಬಿದ್ದು ಹೋಯ್ತು ಅಂತ ಅನ್ಕೋಬಾರದು ಎಂದ ಡಿವಿಎಸ್ ಒಂದೊಮ್ಮೆ ಅಪ್ಪ – ಮಕ್ಕಳು ಇದ್ದಲ್ಲಿ ತಲೆ ಹಾಕಿ ಮಲಗಬಾರ್ದು ಅಂತಿದ್ದರು ಸಿದ್ದರಾಮಯ್ಯ.
ಈಗ ನೋಡಿ ಅದೇ ಅಪ್ಪ ಮತ್ತು ಮಕ್ಕಳ ಬಳಿ ಅಲೆದಾಡುತ್ತಿದ್ದಾರೆ.
ಸಿದ್ದರಾಮಯ್ಯ ನಾಟಕೀಯ ನಡವಳಿಕೆ ನೋಡಿದ್ರೆ ನಗು ಬರುತ್ತೆ ಎಂದು ಲೇವಡಿ ಮಾಡಿದ್ದಾರೆ.
ತಮ್ಮ ಮಾತನ್ನೇ ಮರೆತವರು ಜನರ ಮಾತನ್ನು ಎಷ್ಟು ಉಳಿಸಿಯಾರು ಅನ್ನೋದೆ ಇಲ್ಲಿ ಪ್ರಮುಖ ಚರ್ಚೆಯ ಪ್ರಶ್ನೆಯಾಗಿದೆ ಎಂದು ಸದಾನಂದ ಗೌಡರು ಪ್ರತಿಕ್ರೀಯಿಸಿದ್ದಾರೆ.