Connect with us

LATEST NEWS

ಸ್ವಲ್ಪ ದಿನದಲ್ಲಿ ಸೂತ್ರಧಾರಿಗಳು ಯಾರೆಂದು ನಾವು ಹೇಳ್ತೆವೆ – ಬಿಕೆ ಹರಿಪ್ರಸಾದ್

ಮಂಗಳೂರು ಜೂನ್ 05: ಜಿಲ್ಲೆಯಲ್ಲಿ ಕೆಲವೊಂದು ನಡೆಯ ಬಾರದ ಘಟನೆ ನಡೆದಿದೆ ಯಾರು ದೃತಿಗೆಡಬಾರದು ಎಂದು ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ ಎಂದು ಎಂಎಲ್ ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನ ಮುಸ್ಲಿಂ ಮುಖಂಡರ ರಾಜೀನಾಮೆ ಕುರಿತಂತೆ ಕೇಳಿ ಪ್ರಶ್ನೆಗೆ ನಾನು ಸಭೆ ನಡೆಸಲು ಬಂದಿಲ್ಲ, ಪ್ರತೀ ಸಾರಿ ಬರೋ ಹಾಗೆ ಯಥಾ ಪ್ರಕಾರ ಬಂದಿದ್ದೇನೆ, ಕೆಲವು ನಡೆಯಬಾರದ ಘಟನೆ ಜಿಲ್ಲೆಯಲ್ಲಿ ನಡೆದಿದೆ, ಯಾರೂ ದೃತಿಗೆಡೋದು ಬೇಡ ಅಂತ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ. ಉಸ್ತುವಾರಿ ಮಾಡ್ತಾರೆ ಅನ್ನೋ ಊಹಾಪೋಹಗಳನ್ನ ಬಿಟ್ಟು ಬಿಡಿ ಎಂದರು.
ಮುಖ್ಯಮಂತ್ರಿಗಳ ಭೇಟಿ ಸೌಜನ್ಯದ ಭೇಟಿಯಾಗಿದ್ದು, ಈ ವೇಳೆ ಮಂಗಳೂರನ್ನ ಮಣಿಪುರ ಮಾಡಬೇಡಿ ಹೇಳಿದ್ದು. ಇಡೀ ರಾಜ್ಯದಲ್ಲಿ ಶಾಂತಿ ನೆಲೆಸಿರೋವಾಗ ಕರಾವಳಿಯಲ್ಲಿ ಯಾಕೆ ಹೀಗಾಗ್ತಿದೆ ಅನ್ನೋದನ್ನ ನೋಡಬೇಕಿದೆ. ಅಮಾಯಕರನ್ನ ಹೋಗಿ ಸಾಯಿಸೋಕೆ ಇದು ಉತ್ತರಪ್ರದೇಶ,‌ ಮಣಿಪುರ ಅಲ್ಲ, ಇದರ ಬಗ್ಗೆ ಕ್ರಮ ತೆಗೋಳಿ ಅಂದಾಗ ಅವರೇ ಸ್ವಲ್ಪ ಹದಗೆಟ್ಟಿದೆ ಸರಿ ಮಾಡ್ತೀವಿ ಎಂದಿದ್ದಾರೆ ಎಂದರು.

ನಾವು ನ್ಯಾಯದ ಪರ ಇದ್ದು ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡಬೇಡಿ, ಹಾಗಾಗಿ‌ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಲು ಬಂದಿದ್ದೇನೆ .ರಾಜೀನಾಮೆ ಬೇಕಾಗಿಲ್ಲ, ಯಾರು ಸಹ ಉಗ್ರವಾಗಿ ಯೋಚನೆ ಮಾಡೋದು ಕೂಡ ಬೇಕಾಗಿಲ್ಲ, ನಾನು ಎಲ್ಲರಿಗೂ ಮಾತನಾಡಿಸ್ತೀನಿ, ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನೂ ಕಳೆದುಕೊಳ್ಳಲು ತಯಾರಿಲ್ಲ ಎಂದರು. ಯಾವುದೋ ಭಾವನಾತ್ಮಕವಾಗಿ ಮನಸ್ಸಿಗೆ ನೋವಾದಾಗ ರಾಜೀನಾಮೆ ಕೊಟ್ಟಿದ್ದಾರೆ.

ಎಲ್ಲರಿಗೂ ರಾಜೀನಾಮೆ ವಾಪಸ್ ಪಡೆಯಲು ಮನವಿ ಮಾಡ್ತೇನೆ , ಸರ್ಕಾರ ಜೊತೆಗಿರುವಾಗ ನಾವು ಕೆಲಸ ಮಾಡಿಲ್ಲ ಅಂದ್ರೆ ರಾಜೀನಾಮೆ ಕೊಡಬೇಕು, ನಾವು ಸೈದ್ದಾಂತಿಕವಾಗಿ ಬಹಳ ದೃಢವಾಗಿ ಇದ್ದಂಥವರು, ನಮ್ಮ ಸಿದ್ಧಾಂತಕ್ಕೆ ದಕ್ಕೆಯಾದಾಗ ಯಾರೂ ಸಹ ಹಾಗೆ ಮಾಡಬಹುದು ಎಂದರು.

ಇನ್ನು ಜಿಲ್ಲೆಯಲ್ಲಿ ನಡೆದ ಕೊಲೆ ಬಗ್ಗೆ ಮಾತನಾಡಿದ ಅವರು ಇದರಲ್ಲಿ ಪಾತ್ರದರಿಗಳಿದ್ದರೆ ನೋಡಿ ಅವರು ಅವರ ಕುಟುಂಬದವರು ಪಾಪದವರು, ಸೂತ್ರಧಾರಿಗಳು ಕೈಯಿಂದ ತಪ್ಪಿಸಿಗೊಳ್ತಾ ಇದ್ದಾರೆ, ಸೂತ್ರಧಾರಿಗಳ ಕೈ ಗೊಂಬೆಗಳಾಗಿ ಪಾತ್ರದಾರಿಗಳು ಪ್ರಾಣ ಕಳ್ಕೊಳ್ತಾ ಇದ್ದಾರೆ ಕೊಲೆಯಾಗ್ತಿದ್ದರೆ, ಜೈಲ್ ಗೂ ಹೋಗ್ತಾ ಇದ್ದಾರೆ, ಸ್ವಲ್ಪ ದಿನದಲ್ಲಿ ಸೂತ್ರದರಿಗಳು ಯಾರೆಂದು ನಾವು ಹೇಳ್ತೆವೆ, ಅಲ್ಲಿಯ ತನಕ ಪೊಲೀಸ್ ಅಧಿಕಾರಿ ಗಳು ಒಳ್ಳೆಯವರಿದ್ದಾರೆ ಕ್ರಮ ತೆಗೆದುಕೊಳ್ಳುತ್ತಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *