LATEST NEWS
ಅರ್ ಸಿಬಿ ರಾಜ್ಯದ ಅಥವಾ ರಾಷ್ಟ್ರದ ಟೀಂ ಅಲ್ಲ – ಬಿಸಿಸಿಐ ಪ್ರಾಣ ಕಳೆದುಕೊಂಡವರಿಗೆ ಒಂದೊಂದು ಕೋಟಿ ಕೊಡಬೇಕು – ಬಿ.ಕೆ ಹರಿಪ್ರಸಾದ್

ಮಂಗಳೂರು ಜೂನ್ 05: ಆರ್ ಸಿಬಿ ರಾಜ್ಯದ ಅಥವಾ ರಾಷ್ಟ್ರದ ಟೀಂ ಅಲ್ಲ, ಅದನ್ನು ನಡೆವರು ಕೋಟ್ಯಾಧಿಪತಿಗಳಲ್ಲ, ಸಾವಿರಾರು ಕೋಟಿ ಓಡೆಯರು ಹೀಗಾಗಿ ಪ್ರಾಣ ಕಳೆದುಕೊಂಡವರಿಗೆ ಬಿಸಿಸಿಐ ಒಂದೊಂದು ಕೋಟಿ ಕೋಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿ ಪ್ರಸಾದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಯಾವುದೋ ಒಂದು ಭಾವನೆ ಮತ್ತು ಹರ್ಷೋದ್ಘಾರದಲ್ಲಿ ವಿಜಯೋತ್ಸವ ಮಾಡುವಾಗ ಘಟನೆ ನಡೆದಿದೆ. ಈ ಐಪಿಎಲ್ ನಡೆಸೋರು ಕರೋಡ್ ಪತಿಗಳಲ್ಲ, ಸಾವಿರಾರು ಕೋಟಿ ಮಾಲೀಕರು, ಪ್ರಾಣ ಕಳೆದುಕೊಂಡವರಿಗೆ ಬಿಸಿಸಿಐ ಒಂದೊಂದು ಕೋಟಿ ಕೊಡಬೇಕು , ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಮಾಡ್ತೀನಿ, ಅವರು ಬಿಸಿಸಿಐನಿಂದ ಒಂದು ಕೋಟಿ ಕೊಡಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಏನ್ ಮಾಡಿದೆ ಏನ್ ಮಾಡಿಲ್ಲ ಅಂತ ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳಲು ಆಗಲ್ಲ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಈ ಬಗ್ಗೆ ತಿಳುವಳಿಕೆ ಕೊಡಬೇಕು. ಚಿನ್ನಸ್ವಾಮಿ ಕೆಪಾಸಿಟಿ ಇರೋದು 35 ಸಾವಿರ ಜನ ಮಾತ್ರ, ಉಚಿತ ಅಂದ ತಕ್ಷಣ ಮೂರು ಲಕ್ಷ ಜನ ಅಲ್ಲಿಗೆ ಬಂದಿದಾರೆ. ಸಾವಿರಕ್ಕೆ ಒಂದು ಪೊಲೀಸ್ ನಮ್ಮಲ್ಲಿರೋದು, ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ. ಸಾವು ಹೊರಗಡೆ ಆದಾಗ ಒಳಗಡೆ ಸೆಲೆಬ್ರೇಷನ್ ನಿಲ್ಲಿಸಬೇಕಾಗಿತ್ತು. ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಯೋಚನೆ ಮಾಡಬೇಕಾಗಿತ್ತು ಎಂದರು. ಹನ್ನೊಂದು ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು ಇದು ಸರ್ಕಾರ ನಡೆಸಿರೋ ಕ್ರಿಕೆಟ್ ಅಲ್ಲ, ವಿಧಾನಸೌಧದ ಬಳಿ ಏನೂ ಆಗಿಲ್ಲ, ಸ್ಟೇಡಿಯಂನವರು ನಡೆಸುವಾಗ ಸ್ವಲ್ಪ ಯೋಚನೆ ಮಾಡಿ ನಡೆಸಬೇಕಿತ್ತು ಎಂದರು.