Connect with us

LATEST NEWS

ಮಂಗಳೂರು ಚಲೋ ಬೈಕ್ ಜಾಥಾ ನಿಷೇಧಿಸಿ -SDPI

ಮಂಗಳೂರು ಸೆಪ್ಟೆಂಬರ್ 02: ಜಿಲ್ಲೆಯ ಶಾಂತಿ ಕದಡುವ  ಬಿಜೆಪಿ ಯುವ ಮೋರ್ಚಾದ ಬೈಕ್ ಜಾಥಾವನ್ನು ನಿಷೇಧಿಸುವಂತೆ ಎಸ್ ಡಿಪಿಐ ಆಗ್ರಹಿಸಿದೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿ ಪಿ ಐ ಜಿಲ್ಲಾದ್ಯಕ್ಷ ಹನೀಫ್ ಖಾನ್ ಕೊಣಾಜೆ. ಸೆಪ್ಟೆಂಬರ್ 7 ರಂದು ಬಿಜೆಪಿ ಯುವ ಮೋರ್ಚಾ ಮಂಗಳೂರಿನಲ್ಲಿ ಹೊರ ಜಿಲ್ಲೆಗಳಿಂದ ಜನರನ್ನು ಬೈಕ್ ರಾಲಿ ಗಳ ಮೂಲಕ ಕರೆಸಿ  ನಡೆಸಲುದ್ದೇಶಿಸಿರುವ “ಮಂಗಳೂರು ಚಲೋ”ಗೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

ಪಿಎಫ್ ಐ ಕೆಎಫ್ ಡಿ ಗಳಿಗೆ ಸಿದ್ದರಾಮಯ್ಯ ಬೆಂಬಲ : ಸಂಸದ ಪ್ರತಾಪ್ ಸಿಂಹ ಆರೋಪ

ಕಳೆದ ಮೂರು ತಿಂಗಳ ಹಿಂದೆ ಕಲ್ಲಡ್ಕದಲ್ಲಿ ಚೂರಿ ಹಾಕಿದ ಘಟನೆಯಿಂದ ಹಿಡಿದು ಹಲವು ದುಷ್ಕೃತ್ಯಗಳ ಮೂಲಕ ಜಿಲ್ಲೆಯ ಶಾಂತಿಯನ್ನು ಕದಡುವ ಹುನ್ನಾರ ನಡೆಸುತ್ತಲೇ ಬಂದಿರುವ ಸಂಘ ಪರಿವಾರ ಸಂಘಟನೆಗಳು ನಡೆಸುತ್ತಿವೆ ಎಂದು ಆರೋಪಿಸಿದರು.

ಈ ಮಂಗಳೂರು ಚಲೋ ಕಾರ್ಯಕ್ರಮದ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸುವ ತಂತ್ರಗಾರಿಕೆಯೂ ಅಡಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ, ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಚೋಧನಾತ್ಮಕ ಭಾಷಣಗಳನ್ನು ಮಾಡಿ ಜಿಲ್ಲೆಯ ಮತ್ತು ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಮಂಗಳೂರಿಗೆ ದಿಗ್ಬಂದನ – ಸೆಪ್ಟೆಂಬರ್ 7 ರಂದು ಬೃಹತ್ ಯುವ ಮೋರ್ಚಾ ಬೈಕ್ ಜಾಥಾ

 

Related Topics: SDPI, BJP Yuva morcha, Mangalore Chalo, Bike Rally, SDPI ban Bike Rally

Share Information
Continue Reading
Advertisement
Click to comment

Leave a Reply

Your email address will not be published. Required fields are marked *