Connect with us

DAKSHINA KANNADA

ಸೆ.10 ಲವ್ ಜಿಹಾದ್ ನ ವಿರುದ್ದ ಪಾಲ್ತಾಡಿನಲ್ಲಿ ಬೃಹತ್ ಸಮಾವೇಶ

ಪುತ್ತೂರು, ಸೆಪ್ಟೆಂಬರ್ 02: ಹಿಂದೂ ಜನಜಾಗೃತಿ ವೇದಿಕೆಯ ವತಿಯಿಂದ ಪಾಲ್ತಾಡು ಲವ್ ಜಿಹಾದ್ ನ ವಿರುದ್ದ ಜನಜಾಗೃತಿಗಾಗಿ ಸಂಕಲ್ಪ ಸಮಾವೇಶದ ಪೂರ್ವಬಾವಿ ಸಭೆ ಪಾಲ್ತಾಡು ವಿಷ್ಣುನಗರದಲ್ಲಿ  ಜರಗಿತು.
ಸೆ.10 ರಂದು ಪಾಲ್ತಾಡಿನಲ್ಲಿ ಜರಗುವ ಬೃಹತ್ ಜನಜಾಗೃತಿ ಆಂದೋಳನದ ರೂಪುರೇಷಗಳ ಬಗ್ಗೆ ಚರ್ಚಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ವಿಭಾಗ ಕಾರ್ಯವಾಹ ನಾ.ಸೀತಾರಾಮ ಸಮಾವೇಶದ ಪೂರ್ವತಯಾರಿಯ ಬಗ್ಗೆ ಸಭೆಯಲ್ಲಿ ಮಾರ್ಗದರ್ಶನ ನೀಡಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕಿಶಾನ್ ಸಂಘದ ಪ್ರಮುಖರಾದ ಬಿ.ಕೆ ರಮೇಶ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮಂತರ ಸಂಘ ಸಂಚಲಕರಾದ ಸುಧಾಕರ್, ಹಿಂದೂ ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾದ ಗಣೇಶ್ ಶೆಟ್ಟಿ ಕುಂಜಾಡಿ, ಸಂಚಾಲಕರಾದ ಲೋಕೇಶ್ ಕುಮಾರ್ ಪಾಲ್ತಾಡಿ, ಬಿಜೆಪಿ ಮುಖಂಡರಾದ ರಾಕೇಶ್ ರೈ ಕೆಡೆಂಜಿ, ಮೋಹನ್ ದಾಸ್ ದೋಳ್ಪಾಡಿ ಉಪಸ್ಥಿತರಿದ್ದರು.

Facebook Comments

comments