LATEST NEWS
ಬಿಜೆಪಿ ಯುವ ಮೋರ್ಚಾ ಬೈಕ್ Rally ಅಶಾಂತಿಗೆ ಕಾರಣ – ಯು.ಟಿ ಖಾದರ್
ಮಂಗಳೂರು ಸೆಪ್ಟೆಂಬರ್ 2: ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾ ಅಶಾಂತಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಬಿಜೆಪಿ ಯುವಮೋರ್ಚಾ ಕಾರ್ಯಕ್ರಮವನ್ನು ಕೈ ಬಿಡಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ಕರೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಸರಿಯಿಲ್ಲ. ಅಶಾಂತಿ ನೆಲೆಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ನಡುವೆ ಬಿಜೆಪಿ ಯುವ ಮೋರ್ಚಾದ ಪ್ರತಿಭಟನಾ ಬೈಕ್ ಜಾಥಾ ಜಿಲ್ಲೆಯಲ್ಲಿ ಮತ್ತೆ ಘರ್ಷಣೆಗೆ ಕಾರಣವಾಗುವ ಸಂಭವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು .
ರಾಜ್ಯದ ಉದ್ದಗಲಕ್ಕೂ ಬೈಕ್ ಜಾಥಾ ನಡೆಸುವ ಅಗತ್ಯವಾದರೂ ಏನಿದೆ ಪ್ರತಿಭಟನಾ ಬೈಕ್ rally ಸಂದರ್ಭದಲ್ಲಿ ದಾರಿ ಮಧ್ಯೆ ಯಾರಿಗಾದರು ತೊಂದರೆಯಾದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.
Related Topic : Mangaluruchalo, BJP, BJPDK, UT Kadar, Rally
You must be logged in to post a comment Login