Connect with us

  LATEST NEWS

  ಪ್ರಧಾನಿ ಮೋದಿ ಸರಕಾರದ ಕಾರ್ಯ ವೈಖರಿ GDP ದರ ಕುಸಿತ -ಮೊಯ್ಲಿ

  ಮಂಗಳೂರು ಸೆಪ್ಟೆಂಬರ್ 02: ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು ಜಿಡಿಪಿ ದರ 5.7 ಕ್ಕೆ ಕುಸಿದಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಎಂ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ .

  ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ನೋಟು ಬ್ಯಾನ್ ಮಾಡಿದ್ದರಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದ್ದು ನೆಲಕಚ್ಚಿದೆ ಎಂದು ಅವರು ಕಿಡಿಕಾರಿದರು .ದೇಶದ ಜಿಡಿಪಿ ತೀವ್ರ ಕುಸಿದಿರುವುದನ್ನು RBI  ಕೂಡಾ ಒಪ್ಪಿಕೊಂಡಿದೆ .

  ಮೋದಿ ನೇತೃತ್ವದ ಸರ್ಕಾರ ಕೇವಲ ಮಾತಿನ ಸರ್ಕಾರ ಎಂದು ಅವರು ವ್ಯಂಗ್ಯವಾಡಿದರು. ಬಣ್ಣಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡಿದ್ದ ಮೋದಿ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದವರು ಆರೋಪಿಸಿದರು. ಚೀನಾ ಬಿಕ್ಕಟ್ಟು ಸೇರಿದಂತೆ ಪಾಕಿಸ್ತಾನದ ಉಪಟಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದರು .

  ರಮಾನಾಥ ರೈ ಗೃಹ ಸಚಿವ ಸ್ಥಾನ 

  ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಸ್ಥಾನ  ಕೈ ತಪ್ಪಿದ ಕುರಿತು ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಬಿ ರಮಾನಾಥ ರೈ , ಮುಖ್ಯಮಂತ್ರಿ ಅವರದ್ದು ಸರಿಯಾದ ನಿರ್ಧಾರ . ಸಚಿವ ಸ್ಥಾನ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ ಎಂದು ಅವರು ತಿಳಿಸಿದರು .

  ಗೃಹ ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ ಆಗಿರಲಿಲ್ಲ ಎಂದು ಹೇಳಿದ ಅವರು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದ್ದಾಗಿ ಅವರು ಸ್ಪಷ್ಟಪಡಿಸಿದ್ದರು.

   

  Share Information
  Advertisement
  Click to comment

  You must be logged in to post a comment Login

  Leave a Reply