BANTWAL
CAA ಪೌರತ್ವ ಕಾನೂನು ವಿರೋಧಿಸಿ ಬಂಟ್ವಾಳದಲ್ಲಿ ರಸ್ತೆಗಿಳಿದ SDPI
ಬಂಟ್ವಾಳ: ಕೇಂದ್ರ ಸರಕಾರ ಅಸಾಂವಿಧಾನಿಕ CAA ಜಾರಿ ಮಾಡಿದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ ಬಂಟ್ವಾಳದಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತರು ಉಪವಾಸದ ಆರಂಭ ದಿನದಂದೇ ರಸ್ತೆಗಿಳಿದು ಕೈಕಂಬದಲ್ಲಿ ಪ್ರತಿಭಟನೆ ನಡೆಸಿದರು.
CAA ಎಂಬುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಇದು ದೇಶವನ್ನು ವಿಭಜನೆಯತ್ತ ಕೊಂಡೊಯ್ಯುವ ಷಡ್ಯಂತರದಿಂದ ಕೂಡಿದೆ ಆದ್ದರಿಂದ ಇದನ್ನು ಒಪ್ಪುವಂತದ್ದಲ್ಲ ಆದ್ದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ವಿರೋಧಿಸುತ್ತದೆ ಎಂದು ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ CAA ವಿರುದ್ಧ ಇದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿದ್ದು CAA ವಾಪಸು ಪಡೆಯದೆ ಇದ್ದರೆ ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಉಗ್ರ ಹೋರಾಟವನ್ನು ಎಸ್ ಡಿ ಪಿ ಐ ಮಾಡಲಿದೆ ತಾವೆಲ್ಲರೂ ಎಲ್ಲಾ ರೀತಿಯ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಪ್ರತಿಭಟನಾ ಸಭೆಯ ಅದ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅದ್ಯಕ್ಷರು ಮೂನಿಶ್ ಅಲಿ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯೆ ಶಾಹಿದಾ ತಸ್ನೀಂ, ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ, ಜಿಲ್ಲಾ ಕೋಶಾಧಿಕಾರಿ ಮೂಸಬ್ಬ ತುಂಬೆ, ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ, ಯೂಸುಫ್ ಆಲಡ್ಕ, ನಝೀರ್ ಫರಂಗಿಪೇಟೆ, ಬಶೀರ್ ಬೊಳ್ಳಾಯಿ, ವಿಮೆನ್ ಇಂಡಿಯಾ ಮೂವ್ಮೆಂಟ್ ಬಂಟ್ವಾಳ ಅದ್ಯಕ್ಷರಾದ ಶಾಕಿರ ಮತ್ತು ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.