Connect with us

LATEST NEWS

ಹಳೆಯಂಗಡಿ ಬಳಿ ರಸ್ತೆ ಅಪಘಾತ ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು

ಹಳೆಯಂಗಡಿ ಬಳಿ ರಸ್ತೆ ಅಪಘಾತ ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು

ಮಂಗಳೂರು ಅಗಸ್ಟ್ 4: ಪಾವಂಜೆ ಸಮೀಪ ದ್ವಿಚಕ್ರ ವಾಹನಕ್ಕೆ ಸ್ಕಾರ್ಪಿಯೋ ಡಿಕ್ಕಿ ಹೊಡೆ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.

ಮೃತ ಸ್ಕೂಟರ್ ಸವಾರ ರವೀಂದ್ರ ಪೂಜಾರಿ ಎಂದು ಗುರುತಿಸಲಾಗಿದೆ. ರವೀಂದ್ರ ಅವರು ಇಂದು ಬೆಳಿಗ್ಗೆ ಪಾವಂಜೆಯಿಂದ ಸ್ಕೂಟರ್ ನಲ್ಲಿ ನಿಟ್ಟೆ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ಢಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ರವೀಂದ್ರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.