ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿಗೆ ಪಿತೃ ವಿಯೋಗ
ಪುತ್ತೂರು, ಅಗಸ್ಟ್ 4: ಪತ್ರಕರ್ತ, ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರ ತಂದೆ ನಾರಾಯಣ ಭಟ್ ಪುಚ್ಚಪ್ಪಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇಂದು ಮುಂಜಾನೆ ತಮ್ಮ ಸ್ವಗೃಹವಾದ ಗುತ್ತಿಗಾರು ಗ್ರಾಮದ ಪುಚ್ಚಪ್ಪಾಡಿಯಲ್ಲಿ ತೀವೃ ಹೃದಯಾಘಾತ ಸಂಭವಿಸಿದ ಹಿನ್ನಲೆಯಲ್ಲಿ ಅವರು ನಿಧನರಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿ, ಸಹಕಾರಿ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ನಾರಾಯಣ ಭಟ್ ಕೃಷಿಯಲ್ಲೇ ತನ್ನ ಬದುಕನ್ನು ಕಟ್ಟಿಕೊಂಡವರು.
ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರು ಜೊತಗೆ ಅಪಾರ ಬಂಧು- ಭಾಂಧವರನ್ನು ಅಗಲಿದ್ದಾರೆ.