Connect with us

DAKSHINA KANNADA

ಸಂಪುಠ ನರಸಿಂಹ ಮಠದ ಹಿಂಬಾಲಕರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ

ಸಂಪುಠ ನರಸಿಂಹ ಮಠದ ಹಿಂಬಾಲಕರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ

ಸುಬ್ರಹ್ಮಣ್ಯ ಅಗಸ್ಟ್ 4: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದ ಪೂಜಾ ವಿಧಿ ವಿಧಾನಗಳಲ್ಲಿ ಸಂಪುಠ ನರಸಿಂಹ ಮಠದ ಪಾತ್ರವೂ ಇದೆ ಎನ್ನುವ ತಗಾದೆಯನ್ನು ಮತ್ತೆ ಮಠದ ವತಿಯಿಂದ ಎತ್ತಲಾಗಿದೆ.

ಆದರೆ ಈ ತಗಾದೆಗೆ ದೇವಸ್ಥಾನದ ವತಿಯಿಂದ ಇದೀಗ ಸ್ಪಷ್ಟನೆಯನ್ನೂ ನೀಡಲಾಗಿದೆ. ಅನಾದಿ ಕಾಲದಿಂದಲೂ ದೇವಸ್ಥಾನವು ರಾಜರ ಹಾಗೂ ಬಳಿಕ ಸರಕಾರದ ಆಡಳಿತಕ್ಕೆ ಒಳಪಟ್ಟಿದೆ. ಸಂಪುಟ ನರಸಿಂಹ ಮಠವು ದೇವಸ್ಥಾನದ ವಿಚಾರದಲ್ಲಿ ಹಲವು ಬಾರಿ ಕಾನೂನಾತ್ಮಕ ಹೋರಾಟ ನಡೆಸಿದರೂ, ತೀರ್ಪು ಮಾತ್ರ ದೇವಸ್ಥಾನದ ಪರವಾಗಿಯೇ ಬಂದಿದೆ.

ದೇವಸ್ಥಾನದ ವತಿಯಿಂದ ಅನಾದಿ ಕಾಲದಿಂದಲೂ ಸಂಪುಟ ನರಸಿಂಹ ಮಠದ ಸ್ವಾಮೀಜಿಗಳಿಗೆ ಗೌರವ ಸಲ್ಲಿಸುವ ಪ್ರಕ್ರಿಯೆ ನಡೆದು ಬಂದಿದ್ದು, ಇದನ್ನೇ ಬಳಸಿಕೊಂಡು ದೇವಸ್ಥಾನದ ಧಾರ್ಮಿಕ ಮತ್ತು ಆಡಳಿತಾತ್ಮಕ ವಿಚಾರದಲ್ಲಿ ಮಠ ಕೈ ಹಾಕುವುದು ಸರಿಯಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಮಠದ ಹಿಂಬಾಲಕರು ಈ ರೀತಿಯ ಪ್ರಕ್ರಿಯೆಯನ್ನು ಮುಂದುವರಿಸಿದ್ದೇ ಆದಲ್ಲಿ ಈ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ದೇವಸ್ಥಾನದ ಹೆಸರಿನಲ್ಲಿ ಮಠ ಸೇರಿದಂತೆ ಹಲವು ಕಡೆಗಳಲ್ಲಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಿದ್ದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

ಈ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿತ್ತು. ಈ ಹಿನ್ನಲೆಯಲ್ಲಿ ಮಠದ ವತಿಯಿಂದ ಇದೀಗ ದೇವಸ್ಥಾನದ ಪೂಜಾ ವಿಧಿವಿಧಾನಗಳಲ್ಲಿ ತಮ್ಮದೂ ಪಾತ್ರವಿದೆ ಎನ್ನುವ ಹೇಳಿಕೆಯನ್ನು ನೀಡಲಾಗಿತ್ತು.