Connect with us

  KARNATAKA

  ನಿಂತಿದ್ದ ಟ್ರ್ಯಾಕ್ಟರ್ ಗೆ ಸ್ಕೂಲ್ ಬಸ್ ಡಿಕ್ಕಿ ನಾಲ್ವರು ವಿಧ್ಯಾರ್ಥಿಗಳ ಸಾವು

  ಜಮಖಂಡಿ ಜನವರಿ 29: ನಿಂತಿದ್ದ‌ ಟ್ರ್ಯಾಕ್ಟರ್‌ಗೆ ಶಾಲಾ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ನಾಲ್ವರು ಶಾಲಾ ವಿಧ್ಯಾರ್ಥಿಗಳು ಸಾವನಪ್ಪಿದ ಘಟನೆ ಬಾಗಲಕೋಟೆಯ (Bagalkot) ಜಿಲ್ಲೆ ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದಲ್ಲಿ ನಡೆದಿದೆ.


  ಮೃತರನ್ನು ಕವಟಗಿ ಗ್ರಾಮದ ಸದಾಶಿವ ಜಂಬಗಿ (11), ಶ್ವೇತಾ ಪಾಟೀಲ (11) ಬಸವರಾಜ ಕೊಟಗಿ (15) ಸಾಗರ ಕಡಕೋಳ (16) ಎಂದು ಗುರುತಿಸಲಾಗಿದೆ. ತಾಲ್ಲೂಕಿನ ಆಲಗೂರ ಗ್ರಾಮದ ವರ್ಧಮಾನ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಮುಗಿಸಿಕೊಂಡು ಶಾಲಾ ವಾಹನದಲ್ಲಿ ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, 20 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

  ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply