Connect with us

KARNATAKA

ಕಾಂಗ್ರೆಸ್ ಕಚೇರಿಯಲ್ಲಿ ಕಾಣಿಸಿಕೊಂಡ ಸಾವರ್ಕರ್​ ಫೋಟೋ..!

ವಿಜಯಪುರ, ಆಗಸ್ಟ್ 22: ರಾಜ್ಯಾದ್ಯಂತ ಸಾವರ್ಕರ್ ಫೋಟೋ-ಫ್ಲೆಕ್ಸ್​ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಯಲ್ಲಿ ರಾತ್ರೋರಾತ್ರಿ ಅವರ ಫೋಟೋ ರಾರಾಜಿಸಿದೆ.

ಕಾಂಗ್ರೆಸ್ ನಾಯಕರು ಸಾವರ್ಕರ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ ಇತ್ತ ಆ ಪಕ್ಷದ ಕಚೇರಿ ಸುತ್ತಾ ಸಾವರ್ಕರ್ ಫೋಟೋಗಳೇ ಇದ್ದವು. ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ರಾತ್ರಿ ಕೆಲವರು ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ.

ಕಟ್ಟಡದ ಸುತ್ತ ಸಾರ್ವಕರ್ ಫೋಟೋಗಳು ಇರುವುದನ್ನು ಕಂಡು ಸುತ್ತಮುತ್ತಲ ಜನ ಅಚ್ಚರಿಗೊಂಡಿದ್ದಾರೆ. ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲು, ಬೋರ್ಡ್​ಗೆ ಸಾವರ್ಕರ್ ಫೋಟೋ ಅಂಟಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *