LATEST NEWS
ಸಾಸ್ತಾನ ಟೋಲ್ ವಿನಾಯಿತಿ ನೀಡಲು ಒಪ್ಪದ ನವಯುಗ ಸಂಸ್ಥೆ – ಗರಂ ಆದ ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ ಫೆಬ್ರವರಿ : ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆ ಕುರಿತು ಚರ್ಚಿಸಲು ಸೋಮವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಸಾಸ್ತಾನ ಟೋಲ್‍ಗೇಟ್‍ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡಬೇಕೆಂದ ಜಿಲ್ಲಾಧಿಕಾರಿ ಹಾಗೂ ಸಂಸದರ ಸೂಚನೆಯನ್ನು ನವಯುಗ ಕಂಪೆನಿ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟೋಲ್ ಗೇಟ್ ವ್ಯಾಪ್ತಿಯ ಐದು ಗ್ರಾಪಂಗಳ ಗ್ರಾಮಸ್ಥರ ವಾಹನಗಳ ದಾಖಲೆಗಳನ್ನು ಸಂಗ್ರಹಿಸಿ, ಆ ವಾಹನಗಳಿಗೆ ಟೋಲ್‍ನಲ್ಲಿ ವಿನಾಯಿತಿ ನೀಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡಿ ವಾಹನಗಳ ದಾಖಲೆ ಸಂಗ್ರಹಿಸಿ ನೀಡಲಾಗುವುದು. ಇದರಿಂದ ನಕಲಿ ವಾಹನಗಳಿಗೆ ವಿನಾಯಿತಿ ನೀಡುವುದನ್ನು ತಪ್ಪಿಸಬಹುದೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯ ಪಟ್ಟರು.
ಇನ್ನು ಸ್ಥಳೀಯರಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದ ನವಯುಗ ಕಂಪನಿ. ಈಗಾಗಲೇ ಮೂರು ವರ್ಷ ಗಳ ಕಾಲ ಟೋಲ್ ವಿನಾಯಿತಿ ನೀಡಲಾಗಿದೆ. ಪ್ರತಿದಿನ ಶೇ.40 ರಷ್ಟು ವಾಹನಗಳು ಉಚಿತವಾಗಿ ಸಂಚಾರ ಮಾಡುತ್ತಿದೆ. ಈಗಾಗಲೇ ಕಂಪೆನಿ ಸಾಕಷ್ಟು ನಷ್ಟದಲ್ಲಿದೆ. ಈ ಮಧ್ಯೆ ಇಂತಹ ನಿರ್ಧಾರ ಮಾಡುವುದು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಈ ಹಿಂದಿನ ತೀರ್ಮಾನಕ್ಕೆ ವಿರುದ್ಧವಾಗಿದೆ. ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಗರಂ ಆದ ಸಂಸದೆ ಸಭೆಯ ತೀರ್ಮಾನಕ್ಕೆ ಕಂಪೆನಿಯವರು ಒಪ್ಪದಿದ್ದರೆ ಟೋಲ್‍ಗೇಟ್‍ಗೆ ನೀಡಿರುವ ಪೋಲೀಸ್ ಭದ್ರತೆಯನ್ನು ವಾಪಾಸ್ಸು ತೆಗೆದುಕೊಳ್ಳ ಬೇಕಾದೀತು ಎಂದು ಅಧಿಕಾರಿಗಳಿಗೆ ಸಂಸದೆ ಕರಂದ್ಲಾಜೆ ಎಚ್ಚರಿಕೆ ನೀಡಿದರು. ನಗರ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಟೋಲ್‍ಗೇಟ್ ನಿರ್ಮಿಸಲು ಕಾನೂನಿ ನಲ್ಲಿ ಅವಕಾಶ ಇಲ್ಲ. ಆದರೂ ಇಲ್ಲಿ ನಿರ್ಮಿಸಿರುವ ಈ ಟೋಲ್ ಗೇಟ್‍ನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಯಿಂದ ಈವರೆಗೆ 600 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದುದರಿಂದ ಈ ಕಂಪೆನಿ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಅವರು ಆಗ್ರಹಿಸಿದರು.