Connect with us

LATEST NEWS

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೈಸಿಕಲ್ ಏರಿದ ರಾಬರ್ಟ್ ವಾದ್ರಾ

ನವದೆಹಲಿ, ಫೆಬ್ರವರಿ 23 : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯವರ ಅಳಿಯ ರಾಬರ್ಟ್ ವಾದ್ರಾ ಸೋಮವಾರ ತಮ್ಮ ನಿವಾಸದಿಂದ ಕಚೇರಿಗೆ ಬೈಸಿಕಲ್ ಸವಾರಿ ನಡೆಸುವ ಮೂಲಕ ಪ್ರತಿಭಟಿಸಿದ್ದಾರೆ.

ಆದಾಗ್ಯೂ, ಸೂಟ್ ಧರಿಸಿ ಬೈಸಿಕಲ್ ಸವಾರಿ ಮಾಡುವ ವೇಳೆ ವಾದ್ರಾ ಅವರ ಐಷಾರಾಮಿ ವಾಹನ ಮತ್ತು ಭದ್ರತಾ ಸಿಬ್ಬಂದಿಯು ಅವರನ್ನು ಹಿಂಬಾಲಿಸುತ್ತಿದ್ದರಿಂದಾಗಿ ಕೆಲವು ಬಿಜೆಪಿ ಮುಖಂಡರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಾದ್ರಾ ಅವರನ್ನು ಟ್ರೋಲ್ ಮಾಡಲಾಯಿತು.

‘ನಾನು ಹೇಳಿದ್ದನ್ನೇ ಮಾಡುತ್ತೇನೆ. ಸಾಕಷ್ಟು ವಾಹನ ದಟ್ಟಣೆಯ ನಡುವೆಯೂ ಸೋಮವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆ ಸುದೀರ್ಘ ಬೈಸಿಕಲ್ ಸವಾರಿ ನಡೆಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನರು ಪ್ರತಿದಿನ ಏನನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಸರ್ಕಾರವು ಇಂಧನ ಬೆಲೆಗಳನ್ನು ಕೂಡಲೇ ಕಡಿಮೆ ಮಾಡಬೇಕು’ ಎಂದು ವಾದ್ರಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ಅಸಮಾಧಾನಗೊಂಡಿರುವ ಸಾಮಾನ್ಯ ಜನರ ಪರವಾಗಿ ಮಾತನಾಡುತ್ತಿದ್ದೇನೆ. ಹೀಗಾಗಿ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವನ್ನು ಹಿಂಪಡೆಯಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ವಾದ್ರಾಗೆ ತಿರುಗೇಟು ನೀಡಿದ್ದು, ಸೋನಿಯಾ ಗಾಂಧಿಯವರ ‘ಅಳಿಯ’ ರಾಬರ್ಟ್ ವಾದ್ರಾ ಸೈಕ್ಲಿಂಗ್‌ಗೆ ಹೋಗುವಾಗ ದುಬಾರಿ ಸೂಟ್ ಧರಿಸಿದ್ದಾರೆ. ಡೀಸೆಲ್ ಜಾಸ್ತಿ ಕುಡಿಯುವ ಲ್ಯಾಂಡ್ ಕ್ರೂಸರ್ ಅವರನ್ನು ಹಿಂಬಾಲಿಸುವ ಈ ಮೂಲಕ ಇಂಧನ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.

Facebook Comments

comments