LATEST NEWS
ರಾಗಿಣಿ ನಂತರ ಸಂಜನಾ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾಕ್ಕೆ ಮತ್ತೊಂದು ನಟಿ ಜೈಲು ಸೇರಿದ್ದಾರೆ. ಸಂಜನಾ ಸಿಸಿಬಿ ಕಸ್ಟಡಿ ಇಂದು ಅಂತ್ಯವಾದ ಹಿನ್ನಲೆ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಸಂಜನಾರನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಸಂಜನಾ ಜೊತೆ ಆರೋಪಿಗಳಾದ ವೀರೇನ್ ಖನ್ನಾ, ರವಿಶಂಕರ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತು.
ಇದೀಗ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ ನಟಿ ರಾಗಿಣಿ ಬೆನ್ನಲ್ಲೇ ಈಗ ನಟಿ ಸಂಜನಾ ಜೈಲುಪಾಲಾಗಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ ಎರಡನೇ ನಟಿ ಎಂಬ ಕುಖ್ಯಾತಿಗೆ ಸಂಜನಾ ಪಾತ್ರವಾಗಿದ್ದಾರೆ.
ಇಂದು ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಸಂಜನಾರನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಸಂಜನಾ ಜೊತೆ ಆರೋಪಿಗಳಾದ ವೀರೇನ್ ಖನ್ನಾ, ರವಿಶಂಕರ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತು.
ಸಾಂತ್ವನ ಕೇಂದ್ರದಲ್ಲಿದ್ದ ಸಂಜನಾರನ್ನು ಬೆಳಗ್ಗೆ ಕೆಸಿ ಜನರಲ್ ಆಸ್ಪತ್ರಗೆ ಕರೆತಂದು ವೈದ್ಯಕೀಯ ಪರೀಕ್ಷೆ, ಕೊರೊನಾ ಟೆಸ್ಟ್ ನಡೆಸಲಾಯಿತು. ಬಳಿಕ ಸಾಂತ್ವನ ಕೇಂದ್ರಕ್ಕೆ ಕರೆತಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇಂದಿನ ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಕಸ್ಟಡಿಗೆ ನೀಡುವಂತೆ ಕೇಳಿರಲಿಲ್ಲ. ಹೀಗಾಗಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತು.
Facebook Comments
You may like
-
ಜೆರಾಕ್ಸ್ ಡಿಎಲ್ ನೀಡಿದ್ದಕ್ಕೆ ಯುವಕನ ಮೇಲೆ ಕೋಟ ಪೊಲೀಸರ ದರ್ಪ..ಯುವಕನ ತಾಯಿಯ ಮೇಲೂ ಕೈ ಮಾಡಿದ ಆರೋಪ….!!
-
ಕಾಟಿಪಳ್ಳ – ಬೈಕ್ ನಲ್ಲಿ ಬಂದು ಯುವಕನಿಗೆ ಚೂರಿ ಇರಿತ
-
35 ಲಕ್ಷದ ಚಿನ್ನಾಭರಣ ಗಿಫ್ಟ್ ಆಸೆಗೆ 1.35 ಲಕ್ಷ ಕಳೆದುಕೊಂಡ ಮಂಗಳೂರು ವ್ಯಕ್ತಿ..!
-
ಸಿನಿಮಾ ಮಂದಿರಗಳಿಗೆ ಶೇ 50ಕ್ಕಿಂತ ಹೆಚ್ಚಿನ ಆಸನ ಭರ್ತಿಗೆ ಅವಕಾಶ
-
ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..!
-
ಕನ್ನಡಿಗ ಗೋಪಿನಾಥ್ ರ ಜೀವನ ಕಥೆ-ಆಸ್ಕರ್ ರೇಸ್ನಲ್ಲಿ ಸೂರರೈ ಪೊಟ್ರು
You must be logged in to post a comment Login