Connect with us

    FILM

    ಡ್ರಗ್ ಮಾಫಿಯಾ ನಟಿ ಸಂಜನಾ ಗಿರ್ಲಾನಿ 5 ದಿನ ಸಿಸಿಬಿ ವಶಕ್ಕೆ

    ಬೆಂಗಳೂರು ಸೆಪ್ಟೆಂಬರ್ 08: ಡ್ರಗ್ ಮಾಫಿಯಾಕ್ಕೂ ನನಗೆ ಸಂಬಂಧವಿಲ್ಲ ಎಂದು ಮಾಧ್ಯಮಗಳ ಮುಂದೆ ಪೋಸ್ ನೀಡಿದ್ದ ನಟಿ ಸಂಜನಾ ಗಿರ್ಲಾನಿ ಅವರನ್ನು 8ನೇ ಎಸಿಎಂಎಂ ನ್ಯಾಯಾಲಯ ಐದು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ.

    ಪ್ರಕರಣದಲ್ಲಿ ಎ14 ಆರೋಪಿಯಾಗಿರುವ ಸಂಜನಾ ಅವರನ್ನು ಮಂಗಳವಾರ ಬೆಳಗ್ಗೆ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ಸುಮಾರು ಮೂರು ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದರು. ಬಳಿಕ ನಟಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.


    ಆರೋಪಿಯ ವಿಚಾರಣೆ ನಡೆಸಿದ 8ನೇ ಎಸಿಎಂಎಂ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ಐದು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದೆ. ಇನ್ನು ಈ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ. ಅಲ್ಲದೆ, ಈ ಡ್ರಗ್ ಮಾಫಿಯಾ ಪ್ರಕರಣದ 2ನೇ ಆರೋಪಿ ಆಗಿದ್ದಾರೆ.


    ಇಂದಿರಾನಗರದಲ್ಲಿರುವ ಸಂಜನಾ ಮನೆ ಮೇಲೆ ಸಿಸಿಬಿ ಸರ್ಚ್ ವಾರೆಂಟ್ ಸಮೇತ ದಾಳಿ ಮಾಡಿದ್ದರು. ಮುಂಜಾನೆ ನಡೆದ ದಾಳಿಯಿಂದ ಸಂಜನಾ ಶಾಕ್‌ ಆಗಿದ್ದರು. ಮೂರು ವಾಹನಗಳಲ್ಲಿ ಆಗಮಿಸಿದ್ದ ಅಧಿಕಾರಿಗಳು ಮನೆಯನ್ನು ಸಂಪೂರ್ಣವಾಗಿ ಹುಡುಕಾಟ ನಡೆಸಿ, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದರು. ನಂತರ ಸಂಜನಾರನ್ನು ನೇರವಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದು, ವಿಚಾರಣೆ ಮಾಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply