Connect with us

LATEST NEWS

ಮರಳುಗಾರಿಕೆ – ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ಪ್ರಮೋದ್ ಮಧ್ವರಾಜ್ ಅನಿರೀಕ್ಷಿತ ಭೇಟಿ

Share Information

ಉಡುಪಿ, ಸೆಪ್ಟಂಬರ್ 11: ಜಿಲ್ಲೆಯ ಸಿಆರ್ ಝೆ಼ಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಮುದ್ರದಲ್ಲಿ ದೋಣಿಗಳು ಸಂಚರಿಸಲು ಅಡ್ಡಿಯಾಗಿರುವ ಮರುಳು ದಿಬ್ಬಗಳನ್ನು ಮಾತ್ರ ತೆಗೆಯಲು ಅವಕಾಶ ನೀಡಲಾಗಿದೆ ಎಂದು ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ಅನಿರೀಕ್ಷಿತ ಭೇಟಿ

ಅವರು ಸೋಮವಾರ ರಜತಾದ್ರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು.
ಸಮುದ್ರದಲ್ಲಿ ಎನ್.ಐ.ಟಿ.ಕೆ ಯ ತಜ್ಞರ ತಂಡದಿಂದ ದೋಣಿಗಳ ಸಂಚರಿಸಲು ಅಡ್ಡಿಯಾಗಿರುವ ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಗುರುತಿಸಿರುವ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ನೀಡಲಾಗಿದೆ ಹಾಗೂ ತೆಗೆಯುವ ಮರಳನ್ನು ಜಿಲ್ಲೆಯ ಉಪಯೋಗಕ್ಕೆ ಮಾತ್ರ ಬಳಸುವಂತೆ ಮತ್ತು ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೊರಗೆ ಸಾಗಿಸದಂತೆ ಸಚಿವರು ಸೂಚಿಸಿದರು.

ದೋಣಿಗಳಿಗೆ ಜಿಪಿಎಸ್ ಆಳವಡಿಕೆ ಕಡ್ಡಾಯ

ಮರಳುಗಾರಿಕೆಗೆ ತೆರಳುವ ದೋಣಿಗಳಿಗೆ ಜಿಪಿಎಸ್ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ತಮಗೆ ಅವಕಾಶ ನೀಡಿದ ಪ್ರದೇಶ ಬಿಟ್ಟು ಬೇರೆಡೆಯಲ್ಲಿ ಮರಳು ತಗೆಯದಂತೆ ಸಚಿವರು ಸೂಚಿಸಿದರು, ಜಿಪಿಎಸ್ ಅಳವಡಿಕೆಯಿಂದ ಮರಳುಗಾರಿಕೆಯ ಪ್ರತಿಯೊಂದು ಮಾಹಿತಿ ಲಭ್ಯವಾಗಲಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ಮರಳು ತೆಗೆಯಲು ಪರ್ಮಿಟ್ ಪಡೆದಿರುವ ಪ್ರತಿಯೊಬ್ಬರಿಗೂ ಜಿಪಿಎಸ್ ಅಳವಡಿಕೆ ಕುರಿತು ಮಾಹಿತಿ ನೀಡಿದ ಹಾಗೂ ರಾಷ್ಟ್ರೀಯ ಹಸಿರು ಪೀಠ ಹಾಕಿರುವ ಷರತ್ತುಗಳ ಅನ್ವಯ ಮರಳುಗಾರಿಕೆ ನಡೆಸುವಂತೆ ಎಲ್ಲಾ ಪರ್ಮಿಟ್ ದಾರರಿಗೆ ಸೂಚಿಸಿದ ಸಚಿವರು, ನಿಯಮಗಳನ್ನು ಉಲ್ಲಂಘಿಸಿದಲ್ಲಿ ಹಸಿರು ಪೀಠದಿಂದ ಜಿಲ್ಲೆಯಲ್ಲಿ ಮರುಳುಗಾರಿಕಗೆ ತಡೆಯಾಜ್ಞೆ ಬರಲಿದೆ ಎಂದು ಹೇಳಿದರು.

ನನ್ನ ಮೇಲೆ ಆರೋಪ ಸಲ್ಲದು ಪ್ರಮೋದ್ ಮಧ್ವರಾಜ್

ತಾವು ಜಿಲ್ಲೆಯ ಜನತೆಯ ಹಿತಕ್ಕಾಗಿ ಮತ್ತು ಪರಿಸರ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ಸುಮ್ಮನೆ ಆರೋಪಗಳ್ನು ಮಾಡಬೇಡಿ ಜಿಲ್ಲೆಯಲ್ಲಿ ಮರಳುಗಾರಿಕಾ ವಾಹನಗಳಿಗೆ ಮತ್ತು ದೋಣಿಗಳಿಗೆ ಜಿಪಿಎಸ್ ಅಳವಡಿಸಲು ಟೆಲಿಮ್ಯಾಟಿಕ್ಸ್ ಫಾರ್ ಯು ಸರ್ವಿಸ್ ಪ್ರೈ ಲಿ. ಕಂಪೆನಿಗೆ ಟೆಂಡರ್ ಪಡೆದಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಯಶಸ್ವಿಯಾಗಿ ಜಿಪಿಎಸ್ ಅಳವಡಿಸಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.


Share Information
Advertisement
Click to comment

You must be logged in to post a comment Login

Leave a Reply