Connect with us

    FILM

    ನನಗೆ ಯಾವುದೇ ಅಕ್ರಮ ಸಂಬಂಧವಿಲ್ಲ, ಅಬಾರ್ಷನ್ ಕೂಡ ಆಗಿಲ್ಲ – ಸಮಂತಾ

    ಹೈದರಾಬಾದ್ : ಅಧಿಕೃತ ವಿಚ್ಚೇದನ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಗಾಸಿಫ್ ಗಳಿಗೆ ಸಮಂತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಂತೆ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಅವರು ನನ್ನ ಬಗ್ಗೆ ಹಲವು ರೂಮರ್‌ಗಳು ಹಬ್ಬಿವೆ. ನನಗೆ ಅಕ್ರಮ ಸಂಬಂಧ ಇತ್ತಂತೆ, ಮಕ್ಕಳು ಬೇಡ ಅಂದಿದ್ನಂತೆ, ಅಬಾರ್ಷನ್ ಮಾಡಿಸಿಕೊಂಡಿದ್ನಂತೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.


    ವಿಚ್ಛೇದನ ಎಂಬುದೇ ನೋವಿನ ವಿಷಯವಾಗಿದೆ. ಅದರಿಂದ ಹೊರ ಬರಲು ಸಮಯ ಬೇಕಿದೆ. ಆದರೆ ಅದರ ನಡುವೆ ಈ ರೀತಿಯ ರೂಮರ್‌ಗಳು ಹಬ್ಬಿದೆ. ಆದರೆ ಇವುಗಳಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಸಮಂತಾ ಅಸಮಾಧಾನ ಹೊರ ಹಾಕಿದ್ದಾರೆ.


    ಮಹಿಳೆಯರು ಮಾತ್ರ ನಿರಂತರವಾಗಿ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಅದೇ ಪುರುಷ ಮಾಡಿದಾಗ ನೈತಿಕವಾಗಿ ಅವರನ್ನು ಪ್ರಶ್ನಿಸುವುದಿಲ್ಲ. ಹಾಗಿದ್ದರೆ ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply