Connect with us

FILM

‘ಸಲಾರ್’ ಭಾಗ 1 ‘ಉಗ್ರಂ’ ರಿಮೇಕಾ? ಪ್ರಶಾಂತ್ ನೀಲ್ ಹೇಳಿದ್ರು ರೋಚಕ ಸಂಗತಿ!

ಬೆಂಗಳೂರು, ನವೆಂಬರ್ 30: ಕನ್ನಡ ಚಿತ್ರರಂಗದ ಅದ್ಬುತ ನಿರ್ದೇಶಕ, ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಇದೀಗ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಜತೆಗಿನ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಪ್ಯಾನ್ ಇಂಡಿಯಾ ‘ಸಲಾರ್’ ಭಾಗ 1ರ ರಿಲೀಸ್ ಕೆಲಸದಲ್ಲಿ ಸದ್ಯ ಸಂಪೂರ್ಣವಾಗಿ ನಿರತರಾಗಿದ್ದಾರೆ.

ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿರುವ ‘ಸಲಾರ್’ ಭಾಗ 1, ಪ್ರಭಾಸ್ ಅಭಿಮಾನಿಗಳಲ್ಲಿ ಹಾಗೂ ಸಿನಿಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇವೆಲ್ಲದರ ನಡುವೆ ಕನ್ನಡ ಚಿತ್ರಪ್ರೇಮಿಗಳಿಗೆ ಕಳೆದ ಹಲವು ದಿನಗಳಿಂದ ದೊಡ್ಡ ಗೊಂದಲವೊಂದು ಕಾಡುತ್ತಿದೆ. ಪ್ರಶಾಂತ್ ಅವರು ಈ ಹಿಂದೆ ನಿರ್ದೇಶಿಸಿದ್ದ ಬ್ಲಾಕ್ಬಸ್ಟರ್ ‘ಉಗ್ರಂ’ ಚಿತ್ರದ ಮುಂದುವರಿದ ಕಥೆಯನ್ನೇ ‘ಸಲಾರ್’ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಅನುಮಾನಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

ಇತ್ತೀಚೆಗಷ್ಟೇ ‘ಸಲಾರ್‌’ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ ಪ್ರಶಾಂತ್ ನೀಲ್, ಕಥಾಹಂದರ ಕುರಿತಂತೆ ಒಂದಷ್ಟು ವಿಷಯಗಳನ್ನು ಹೇಳುತ್ತಿರುವಾಗ ರೋಚಕ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

“ಇದು ಇಬ್ಬರು ಸ್ನೇಹಿತರ ನಡುವಿನ ಸಿನಿಮಾ. ಆತ್ಮೀಯರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆ. ಸ್ನೇಹವೇ ಇಲ್ಲಿ ಪ್ರಮುಖ ಅಂಶ. ಸ್ನೇಹಿತರ ಮಧ್ಯೆಯಿರುವ ಪಯಣವನ್ನು ನಾವು ಎರಡು ಭಾಗಗಳಲ್ಲಿ ಹೇಳಲು ಹೊರಟ್ಟಿದ್ದೇವೆ. ನಾವು ಕ್ರಿಯೇಟ್ ಮಾಡಿರುವ ‘ಸಲಾರ್’ ಜಗತ್ತಿನ ಝಲಕ್ ಅನ್ನು ಶೀಘ್ರವೇ ಪ್ರೇಕ್ಷಕರಿಗೆ ಟ್ರೇಲರ್‌ನಲ್ಲಿ ತೋರಿಸಲಿದ್ದೇವೆ” ಎಂದರು.

ಒಂದೆಡೆ ‘ಸಲಾರ್’ ಕಥೆಯಲ್ಲಿ ಇಬ್ಬರು ಸ್ನೇಹಿತರು ಮುಂದೆ ದೊಡ್ಡ ಶತ್ರುಗಳಾಗಿ ಕಾಣಿಸುವುದು ಚಿತ್ರದಲ್ಲಿದೆ ಎಂಬ ಪ್ರಶಾಂತ್ ಅವರ ಮಾತು, ಇದು ಖಂಡಿತ ‘ಉಗ್ರಂ’ ರಿಮೇಕ್ ಇರಬಹುದು ಎಂಬುದನ್ನು ಪ್ರಾಯಶಃ ನಿಜ ಎನ್ನುವಂತೆ ಮಾಡುತ್ತಿದೆ. ಆದ್ರೆ, ಈ ಎಲ್ಲಾ ವದಂತಿಗಳಿಗೆ ಸಲಾರ್ ಬಿಡುಗಡೆಯ ನಂತರವೇ ತೆರೆ ಬೀಳಲಿದೆ ಎಂಬುದಷ್ಟೇ ಸತ್ಯ!

Share Information
Continue Reading
Advertisement
Click to comment

Leave a Reply

Your email address will not be published. Required fields are marked *