Connect with us

FILM

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಖ್ಯಾತ ನಟಿ ಸಾಯಿಪಲ್ಲವಿ

ಉಡುಪಿ ಡಿಸೆಂಬರ್ 22: ಉಡುಪಿಯಲ್ಲಿ ತೆಲುಗು ಸಿನೆಮಾ ಚಿತ್ರಿಕರಣಕ್ಕೆ ಆಗಮಿಸಿರುವ ಖ್ಯಾತ ಚಿತ್ರನಟಿ ಸಾಯಿ ಪಲ್ಲವಿ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಸಾಯಿ ಪಲ್ಲವಿ ಅವರ ಬಹು ನಿರೀಕ್ಷಿತ ತೆಲುಗು ಚಿತ್ರ ಥಾಂಡೆಲ್ ನ ಚಿತ್ರಿಕರಣ ಉಡುಪಿಯ ಮಲ್ಪೆಯಲ್ಲಿ ಆರಂಭಗೊಂಡಿದೆ. ‘ನಾಗಚೈತನ್ಯ ಈ ಸಿನೆಮಾದಲ್ಲಿ ನಟಿಸುತ್ತಿದ್ದು, ಜೋಡಿ ಲವ್‌ಸ್ಟೋರಿ ಸಿನಿಮಾದ ಅನಂತರ ಮತ್ತೆ ತೆರೆಮೇಲೆ ಪಾತ್ರವನ್ನು ಹಂಚಿಕೊಂಡಿದ್ದಾರೆ.

ಉಡುಪಿಯಲ್ಲೇ ಚಿತ್ರಿಕರಣ ಇರುವ ಹಿನ್ನಲೆ ಇಂದು ನಟಿ ಕನಕನ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದರು. ಈ ವೇಳೆ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *