Connect with us

    FILM

    ಕ್ಯಾನ್ಸರ್ ಗೆ ಬಲಿಯಾದ ಮಾಡೆಲ್ ಪೂನಂ ಪಾಂಡೆ…!!

    ಮುಂಬೈ ಫೆಬ್ರವರಿ 02: ವಯಸ್ಕ ಚಿತ್ರಗಳ ತಾರೆ ಸದಾ ವಿವಾದಗಳಿಂದಲೇ ಸುದ್ದಿಯಾಗಿರುತ್ತಿದ್ದ ನಟಿ ಮಾಡೆಲ್ ಪೂನಂ ಪಾಂಡೆ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

    ಕ್ಯಾನ್ಸರ್​ನಿಂದ ಪೂನಂ ಮೃತಪಟ್ಟಿರುವುದಾಗಿ ಅವರ ಇನ್​ಸ್ಟಾಗ್ರಾಮ್ ಖಾತೆ ಯಲ್ಲಿ ಅವರ ಮ್ಯಾನೆಜರ್  ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ಪೂನಂ ಪಾಂಡೆಯ ಮ್ಯಾನೇಜರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಬೆಳಿಗ್ಗೆ ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಪಾಂಡೆಯನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದಾರೆ ಎಂದು ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ ಎಂದು ತಿಳಿಸಿದ್ದಾರೆ.


    ಪೂನಂ ಪಾಂಡೆ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ತೆಲುಗು, ಬೋಜ್​ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿಲ್ಲ. 2011ರಲ್ಲಿ ವಿಶ್ವಕಪ್ ಸಂದರ್ಭ ಭಾರತ ಗೆದ್ದರೆ ಬೆತ್ತಲೆಯಾಗಿ ಓಡುವೆ ಎಂಬ ಹೇಳಿಕೆ ಮೂಲಕ ಪೂನಂ ಪಾಂಡೆ ಸುದ್ದಿಯಾಗಿದ್ದರು. ಬಳಿಕ ಸದಾ ಹಾಟ್ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ವಯಸ್ಕರ ವೆಬ್ ಸೈಟ್ ಗಳಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply