LATEST NEWS
ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾದ ಕೊರೊನಾ ಸೊಂಕಿತನನ್ನು ಪತ್ತೆ ಹಚ್ಚಿದ ಪೊಲೀಸರು

ಮಂಗಳೂರು, ಜು 06: ಮಂಗಳೂರಿನ ಕೊವೀಡ್ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ದೇವರಾಜು(18)ನನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಸಿಬ್ಬಂದಿಗಳಾದ ಶಂಕರಪ್ಪ ಲಮಣಿ ಮತ್ತು ಶಂಕರಪ್ಪ ನಂದ್ಯಾಲ್ ಅವರು ವೆನ್ಲಾಕ್ ಆಸ್ಪತ್ರೆಯಿಂದ ಓಡಿಹೋದ ಕೊವೀಡ್ ಸಕಾರಾತ್ಮಕ ಪಾಸಿಟಿವ್ ಇದ್ದ ಆರೋಪಿಗಳನ್ನು ತ್ವರಿತ ಮತ್ತು ಸಮರ್ಕವಾಗಿ ಪತ್ತೆ ಹಚ್ಚಿ ಬಂಧಿಸುವ ಮೂಲಕ ನಿಜವಾದ ಹೀರೋಗಳಾಗಿದ್ದಾರೆ” ಎಂದು ನಗರ ಪೊಲೀಸ್ ಆಯುಕ್ತ ಸಿ.ಪಿ ವಿಕಾಸ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದೇ ವೇಳೆ ಆರೋಪಿ ದೇವರಾಜ್ ನಿಂದ ಅನೇಕರಿಗೆ ಸೋಂಕು ತಗುಲಿರಬಹುದು ಎಂಬ ಆತಂಕವನ್ನು ಪೊಲೀಸ್ ಆಯುಕ್ತರು ವ್ಯಕ್ತಪಡಿಸಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಸ್ಟೇಟ್ ಬ್ಯಾಂಕ್ ನ ಬಾರ್ ಬಳಿ ಆತನನ್ನು ಬಂಧಿಸಲಾಯಿತು. ಆತನ ಬಳಿ ಪ್ರಯಾಣಿಸಲು ಹಣವಿರದೆ ಸ್ಟೇಟ್ ಬ್ಯಾಂಕ್, ನೆಹರು ಮೈದಾನದ ಬಳಿ ಸುತ್ತಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.