Connect with us

    LATEST NEWS

    ದಕ್ಷಿಣಕನ್ನಡ 34 ಮಂದಿಗೆ ಕೊರೊನಾ ಸೊಂಕು

    ಮಂಗಳೂರು ಜುಲೈ 06: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಇಂದು 34 ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಇದರೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 1268ಕ್ಕೆ ಏರಿಕೆಯಾಗಿದೆ.


    ಇಂದು ಪತ್ತೆಯಾದ ಪ್ರಕರಣಗಳಲ್ಲಿ ಕೊರೊನಾ ರೋಗಿಯ ಪ್ರಾಥಮಿಕ ಸಂಪರ್ಕದಿಂದ 17 ಜನರಿಗೆ ಸೋಂಕು, ILI – 9‌ ಹಾಗೂ 1 SARI ಪ್ರಕರಣ ಸೇರಿದೆ. ಒಂದು ಪ್ರಕರಣದ ಮೂಲ ಪತ್ತೆ ಹಚ್ಚಲಾಗುತ್ತಿದೆ. ಇನ್ನು ಇಂದು ಬೆಳಿಗ್ಗೆ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಮಂಗಳೂರು ಹೊರವಲಯದ ಸಂತೋಷ್ ನಗರ ನಿವಾಸಿ ಮತ್ತು ಉಳ್ಳಾಲ ನಿವಾಸಿ ಇಂದು ಕೋವಿಡ್ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದರು. ಇಂದಿನ ಎರಡು ಸಾವು ಪ್ರಕರಣಗಳಿಂದ ಸೋಂಕಿತರ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇದರಲ್ಲಿ 22 ಮಂದಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದರೆ ಇಬ್ಬರು ಸೋಂಕಿತರು ಅನ್ಯ ಕಾರಣದಿಂದ ಮೃತರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply